ಸೋಮವಾರಪೇಟೆ,ಮಾ.27: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ನಡೆಸಲಾದ ಮೀನು ಮಳಿಗೆ, ಕುರಿ, ಕೋಳಿ ಮಾಂಸ ಮಾರಾಟ ಹಾಗೂ ಸಂತೆ ಸುಂಕ ಎತ್ತಾವಳಿ ಹರಾಜಿನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸ್ಥಳೀಯರು ತಾಲೂಕು ಪಂಚಾಯಿತಿಗೆ ದೂರು ನೀಡಿದ್ದಾರೆ. ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳ ಒಳ ಒಪ್ಪಂದದಿಂದ ಹರಾಜಿನಲ್ಲಿ ಪಂಚಾಯಿತಿಗೆ ರೂ. 3ಲಕ್ಷ ಆದಾಯ ನಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರಿಂದಲೇ ಪಂಚಾಯಿತಿಗೆ ನಷ್ಟ ಭರಿಸಬೇಕೆಂದು ಗ್ರಾಮಸ್ಥರಾದ ವಿಕ್ರಂ, ಪ್ರಸನ್ನ, ವಿನಯಕುಮಾರ್, ಬೆಳ್ಳಿಯಪ್ಪ ಸೇರಿದಂತೆ ಇತರರು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.