ಕುಶಾಲನಗರ, ಮಾ. 27: ನಡೆದಾಡುವ ದೇವರೆಂದು ಖ್ಯಾತಿಗಳಿಸಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 111ನೇ ಹುಟ್ಟುಹಬ್ಬ ಆಚರಣೆ ಸಿದ್ದಗಂಗಾ ಭಕ್ತ ಮಂಡಳಿ ವತಿಯಿಂದ ಹುಲುಸೆ ಗ್ರಾಮದಲ್ಲಿ ಏ.1 ರಂದು ನಡೆಯಲಿದೆ.

ಆಚರಣೆ ಅಂಗವಾಗಿ ಹುಲುಸೆ ಗ್ರಾಮದ ಕಾವೇರಿ ನದಿಯಿಂದ 111 ಕಳಸ ಹೊತ್ತ ಮಹಿಳೆಯರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು ಕಣಿವೆಯ ರಾಮಲಿಂಗೇಶ್ವರ ದೇವಾಲಯದ ಬಳಿ ಸಮಾಪ್ತಿಗೊಳ್ಳಲಿದೆ. ಹುಟ್ಟುಹಬ್ಬ ಆಚರಣೆಗೆ ಎಲ್ಲಾ ಸಮುದಾಯದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.