ಮಡಿಕೇರಿ, ಮಾ. 26: ವೀರಾಜಪೇಟೆ ಸಮೀಪ ಕುಂಜಲಗೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ತಾ. 28 ರಿಂದ 5 ದಿವಸಗಳ ತನಕ ನಡೆಯಲಿದೆ. ತಾ. 28 ರಂದು ಕೊಡಿಮರ ನೆಡುವದು ಮತ್ತು ದಿನಾ ಅಂದಿಬೊಳಕ್, ತಾ. 31 ರಂದು ಮಧ್ಯಾಹ್ನ ಎತ್ತುಪೋರಾಟ, ಕೆಂಗುದರೆ ಮತ್ತು ಕೊಡೆ ಬರುವದು, ದೇವರ ಬಲಿನೃತ್ಯ ನಡೆದು ಸಂಜೆ ತೂಡ್ ಹಬ್ಬ. ಏಪ್ರಿಲ್ 1 ರಂದು ತೆಂಗಿನ ಕಾಯಿಗೆ ಗುಂಡು, ತೆಂಗೆಪೋರ್, ದೇವರ ಜಳಕ, ಅಲಂಕಾರ ಪೂಜೆಯಾದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಕ್ಕ ಮುಖ್ಯಸ್ಥರು ಹಾಗೂ ಊರಿನ ಯೂನಿಯನ್ ಸಂಘದವರು ತಿಳಿಸಿದ್ದಾರೆ.