ಸೋಮವಾರಪೇಟೆ, ಮಾ.26 : ಸಮೀಪದ ತಾಕೇರಿ ಗ್ರಾಮದ ಶ್ರೀ ಈಶ್ವರ ದೇವರ ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ತಾ. 27 ಮತ್ತು 28ರಂದು ಶ್ರೀ ಉಮಾಮಹೇಶ್ವರಿ ದೇವರ ವಾರ್ಷಿಕ ಪೂಜೋತ್ಸವ ನಡೆಯಲಿದೆ ಎಂದು ಪ್ರಮುಖ ತಾಕೇರಿ ಪೊನ್ನಪ್ಪ ತಿಳಿಸಿದ್ದಾರೆ.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.