ವೀರಾಜಪೇಟೆ, ಮಾ.26: ದಾರಿ ತಡೆದು ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ಹರಿಶ್ಚಂದ್ರಪುರದ ಜೇನುಕುರುಬರ ಮಂಜು ಎಂಬಾತನಿಗೆ ಇಲ್ಲಿನ ಅಪರ ಹಾಗೂ ಎರಡನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್‍ಪ್ರಭು ಎರಡು ವರ್ಷ ಸಜೆ ರೂ. 3000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ಗ್ರಾಮದ ಹಡ್ಡಿಯಾ ಎಂಬಲ್ಲಿ ತಾ. 30-7-2017 ರಂದು ಬಿ.ಆರ್.ಅಜಿತ್ ಎಂಬವರನ್ನು ಅಡ್ಡಗಟ್ಟಿಕತ್ತಿ ಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇರೆ ಗೋಣಿಕೊಪ್ಪ ಪೊಲೀಸರು ಮಂಜುವನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಸರಕಾರದ ಪರ ಅಭಿಯೋಜಕರಾದ ನಾರಾಯಣ್ ವಾದಿಸಿದರು.