ಮಡಿಕೇರಿ, ಮಾ. 23: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಹಚ್ಚಿನಾಡ್, ಹಮ್ಮಿಯಾಲ, ಮುಟ್ಲು ಗ್ರಾಮಸ್ಥರ ಸಹಕಾರದೊಂದಿಗೆ ತಾ. 27 ರಂದು ‘ಕೊಡವ ಕಳಿನಮ್ಮೆ’ ಏರ್ಪಡಿಸಲಾಗಿದೆ.

ಅಂದು ಬೆಳಿಗ್ಗೆ 10.30 ಗಂಟೆಗೆ ಹಮ್ಮಿಯಾಲ ಶಾಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಮಂಡೇಪಂಡ ಅಪ್ಪಚ್ಚುರಂಜನ್, ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೇಪಂಡ ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಪುದಿಯತಂಡ ಸುಭಾಷ್ ನಾಣಯ್ಯ, ಜಿ.ಪಂ. ಸದಸ್ಯ ಯಾಲದಾಳು ಪದ್ಮಾವತಿ, ತಾ.ಪಂ. ಸದಸ್ಯ ಮುದ್ದಂಡ ರಾಯ್ ತಮ್ಮಯ್ಯ, ಹಮ್ಮಿಯಾಲ ಗ್ರಾ.ಪಂ. ಸದಸ್ಯ ಮೊಣ್ಣಂಡ ರಮೇಶ್ ಉಪಸ್ಥಿತರಿದ್ದರು.

ಸನ್ಮಾನ : ಇದೇ ಸಂದರ್ಭ ಶತಾಯುಸಿ ಮೊಣ್ಣಂಡ ಸೋಮವ್ವ, ಪ್ರಸೂತಿ ತಜ್ಞೆ ಕೊಟ್ಟೆರ ಗಂಗವ್ವ, ನಾಟಿ ವೈದ್ಯ ಪುದಿಯತಂಡ ರವಿ ಅವರುಗಳನ್ನು ಸನ್ಮಾನಿಸಲಾಗುವದು. ಅಲ್ಲದೆ ವಿವಿಧ ಸ್ಪರ್ಧೆ, ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.