ಮಡಿಕೇರಿ, ಮಾ. 23: ಬೆಟ್ಟತ್ತೂರು ನಿವಾಸಿ ಅರ್ಜುನ್ (70) ಎಂಬ ವ್ಯಕ್ತಿ ಅನಾರೋಗ್ಯದಿಂದ ಸಾವನ್ನಪ್ಪಿರುವದಾಗಿ ತಿಳಿದುಬಂದಿದೆ. ಈ ವ್ಯಕ್ತಿಯ ಸಾವಿನ ಬಗ್ಗೆ ಶಂಕಿಸಿ ವೃದ್ಧನನ್ನು ನೋಡಿಕೊಳ್ಳುತ್ತಿದ್ದ ಕೆ. ಕಾವೇರಪ್ಪ ಎಂಬವರ ಮೇಲೆ ಅಲ್ಲಿನ ನಿವಾಸಿಗಳಾದ ಆನಂದ, ಚರಣ್, ಕಿರಣ್ ಹಾಗೂ ಇತರರು ಹಲ್ಲೆ ನಡೆಸಿರುವದಾಗಿ ಮೃತರ ಸಂಬಂಧಿ ಕಾರ್ಯಪ್ಪ ಎಂಬವರು ಪೊಲೀಸರಿಗೆ ಪುಕಾರು ನೀಡಿದ್ದಾರೆ. ಹಲ್ಲೆ ಹಾಗೂ ಸಾವಿನ ಶಂಕೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ನಿರ್ದೇಶನದೊಂದಿಗೆ ಠಾಣಾಧಿಕಾರಿ ಚೇತನ್ ನೇತೃತ್ವದಲ್ಲಿ ತನಿಖೆ ಕೈಗೊಂಡಿರುವದಾಗಿ ಗೊತ್ತಾಗಿದೆ.