ವೀರಾಜಪೇಟೆ: ಚೆÀಂಬೆಬೆಳ್ಳೂರು ಕಲ್ಲ್‍ತಿರಿಕೆ ಈಶ್ವರ-ಪಾರ್ವತಿ ದೇವಾಲಯದ ವಾರ್ಷಿಕ ಹಬ್ಬವು ತಾ. 26ರಿಂದ 31 ರವರೆಗೆ ನಡೆಯಲಿದೆ ಎಂದು ದೇವಾಲಯ ತಕ್ಕ ಕೊಳುವಂಡ ಕಾರ್ಯಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 26ರಂದು ಪೂರ್ವಾಹ್ನ 7 ಗಂಟೆಗೆ ದೇವರ ಭಂಡಾರ ಬರುವದರ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುವದು. ದೊಡ್ಡಹಬ್ಬ ತಾ. 30ರಂದು ನಡೆಯಲಿದ್ದು ಪೂರ್ವಾಹ್ನ 8 ಗಂಟೆಗೆ ನಿತ್ಯಪೂಜೆ, ಕಳಸಪೂಜೆ, ಕಲಶಾಭೀಷೇಕ, 12 ಗಂಟೆಗೆ ವiಹಾಪೂಜೆ, ಅನ್ನದಾನ ನಡೆಯಲಿದೆ. ಸಂಜೆ 4 ಗಂಟೆಗೆ ದೇವರ ಜಳಕ ನಡೆಯಲಿದೆ ಎಂದು ಹೇಳಿದರು

ಗೋಷ್ಟಿಯಲ್ಲಿ ಸದಸ್ಯರಾದ ಮಂಡೇಪಂಡ ಮಾದಯ್ಯ, ಚೆಂಬಾಂಡ ರಂಜು ಉಪಸ್ಥಿತರಿದ್ದರು.

ಗ್ರಾಮ ದೇವಾಲಯಗಳ ಉತ್ಸವ

ಗುಡ್ಡೆಹೊಸೂರು: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ವಾರ್ಷಿಕ ಪೂಜೆಯು ತಾ.26ರಂದು ನಡೆಯಲಿದೆ. ಅಲ್ಲಿನ ಗ್ರಾಮ ದೇವತೆ ಶ್ರೀಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವ ತಾ. 27ರಂದು ನಡೆಯಲಿದೆ. ಎರಡು ದಿನ ಅನ್ನ ಸಂತರ್ಪಣೆ ನಡೆಯಲಿದೆ.

ರಂಗಸಮುದ್ರ ಗ್ರಾಮದ ಶ್ರೀಜೋಡಿ ಬಸವೇಶ್ವರ ದೇವಸ್ಥಾನದ ವಾರ್ಷಿಕ ಪೂಜೆಯು ಏಪ್ರಿಲ್ 2ರ ಸೋಮವಾರ ಮತ್ತು 3ರ ಮಂಗಳವಾರ ನಡೆಯಲಿದೆ. ಈ ಪೂಜಾ ಕಾರ್ಯದಲ್ಲಿ ವೀರಾಜಪೇಟೆಯ ಅರಮೇರಿ ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸಲಿದ್ದಾರೆ.

ನಂಜರಾಯಪಟ್ಟಣದ ಶ್ರೀನಂಜುಂಡೇಶ್ವರ ದೇವರ ವಾರ್ಷಿಕೋತ್ಸª ತಾ. 26ಮತ್ತು 27 ರಂದು ನಡೆಯಲಿದೆ ಎರಡು ದಿನಗಳಕಾಲ ದೇವಸ್ಥಾನದಲ್ಲಿ ವಿವಿಧ ಪೂಜಾಕಾರ್ಯಗಳು ನಡೆಯಲಿದೆ. ಪವಿತ್ರ ಕಾವೇರಿ ನದಿಯಿಂದ ಗಂಗಾಪೂಜೆ ನಡೆಸಿ ನಂಜುಂಡೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಲ್ಲಿ ದೇವಸ್ಥಾನದ ಮುಂಭಾಗ ಕೊಂಡೊಯ್ದು ನಂತರ ಮಹಾಪೂಜೆ ನಡೆಯಲಿದೆ. ಈ ಪೂಜಾಕಾರ್ಯದಲ್ಲಿ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮತ್ತು ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಮತ್ತು ವಿವಿಧ ಮಠದ ಸ್ವಾಮೀಜಿಗಳು ಹಾಜರಿದ್ದು ಪ್ರವಚನ ನೀಡಲಿದ್ದಾರೆ.

ಶ್ರೀ ಭದ್ರಕಾಳಿ ವಾರ್ಷಿಕೋತ್ಸವ

ಸಿದ್ದಾಪುರ ಶ್ರೀ ಭದ್ರಕಾಳಿ ದೇವಸ್ಥಾನದ 29ನೇ ವಾರ್ಷಿಕ ಮಹೋತ್ಸವ ತಾ. 20ರಿಂದ 22ರ ತನಕ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಅಂಗವಾಗಿ ವಸುರಿಮಳೆ ದೇವಿಯ ಶೋಭಾಯಾತ್ರೆಯು ಪುಣ್ಯನದಿ ಕಾವೇರಿಯಿಂದ ದೇವಸ್ಥಾನದ ತನಕ ಅದ್ಧೂರಿಯಾಗಿ ನಡೆಯಿತು. ದೇವಸ್ಥಾನದಲ್ಲಿ ಭದ್ರಕಾಳಿಯ ತೆರೆ, ರಕ್ತೇಶ್ವರಿ ತೆರೆ, ಭಗವತಿ ತೆರೆ, ಗುಳಿಗನ ತೆರೆಗಳು ನಡೆಯಿತು. ತಾ.22 ರ ಮಧ್ಯಾಹ್ನದ ಅನ್ನದಾನವನ್ನು ಯುವ ಬ್ರಿಗೇಡ್‍ನ ಮನೋಜ್ ಹಾಗೂ ತಂಡ ನೆರವೇರಿಸಿತ್ತು. ದೇವಸ್ಥಾನದ ಮುಖ್ಯಸ್ಥರಾದ ರಾಜನ್, ಕಾರ್ತಿಕೇಯನ್, ಶರುಣ್ ಹಾಗೂ ಗ್ರಾಮಸ್ಥರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಅಮ್ಮತ್ತಿಯಲ್ಲಿ ಸಾಮೂಹಿಕ ಪೂಜೆ

ಮೂರ್ನಾಡು: ಜಗದಲ್ಲಿ ಚರಾಚರ ಜೀವಿಗಳಲ್ಲಿ ಮಾನವ ಮಾತ್ರ ಸ್ವಾರ್ಥಿಯಾಗಿದ್ದಾನೆ. ಉಳಿದವು ನಿಸ್ವಾರ್ಥಿಗಳು ಎಂದು ಮೂರ್ನಾಡಿನ ಅನ್ನಪೂರ್ಣೇಶ್ವರಿ ದೇಗುಲದ ಎಂ. ಮಹಾಬಲೇಶ್ವರ ಭಟ್ ಅಭಿಪ್ರಾಯಿಸಿದರು.

ಅಮ್ಮತ್ತಿಯ ಕೊಡವ ಸಮಾಜದಲ್ಲಿ ಯುಗಾದಿ ಪ್ರಯುಕ್ತ ಆಯೋಜಿತವಾಗಿದ್ದ ಸಾಮೂಹಿಕ ಸತ್ಯ ನಾರಾಯಣ ಪೂಜೆ ಸಂದರ್ಭ ಧಾರ್ಮಿಕ ಉಪನ್ಯಾಸ ನೀಡಿದರು.

ವಿಶ್ವ ಹಿಂದೂ ಪರಿಷತ್ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್‍ನ ಅಧ್ಯಕ್ಷ ಮಾತಂಡ ಟಾಟಾ ಬೋಪಯ್ಯ, ಅಮ್ಮತ್ತಿ ಘಟಕದ ಅಧ್ಯಕ್ಷ ಪಟ್ಟಡ ಸೋಮಯ್ಯ ಉಪಸ್ಥಿತರಿದ್ದರು.

ಈ ಸಂದರ್ಭ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಕತ್ತೂರು ತೊಂಬತ್ತುಮನೆಯ ಸೇವಾ ಸಮಿತಿ ವತಿಯಂದ ಭಜನಾ ಕಾರ್ಯಕ್ರಮ ನಡೆಯಿತು. ಎ.ಕೆ. ಅಚ್ಚಪ್ಪ ಸ್ವಾಗತಿಸಿ, ವಂದಿಸಿದರು.

ದೇವರ ಉತ್ಸವ

ಕಾಂತೂರು-ಮೂರ್ನಾಡು ಭಗವತಿ ದೇವರ ಹಬ್ಬ ತಾ. 30, 31 ಹಾಗೂ ಏಪ್ರಿಲ್ 1 ರಂದು ನಡೆಯಲಿದೆ. ದೇವರ ಸ್ನಾನ ಮುಗಿದು ಏ. 2 ರಂದು ಮೇಲೇರಿ ತೆರೆಯ ಮೂಲಕ ಅಂತ್ಯಗೊಳ್ಳಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.