ಗೋಣಿಕೊಪ್ಪಲು ವರದಿ, ಮಾ. 23: ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ವಾರ್ಷಿಕ ಯೋಜನಾ ಕಾರ್ಯಾಗಾರದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ವಿಷಯದಲ್ಲಿ ಡಾ. ಅರುಣ್ ಬಲಮಟ್ಟಿ ಪ್ರಬಂಧ ಮಂಡಿಸಿದರು. ಕೇರಳ ಕೃಷಿ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ಜಿಜು, ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ನಿರ್ದೇಶಕ ಎಸ್.ಕೆ. ಮೇಟಿ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ನಿರ್ದೇಶಕ ಹೆಚ್. ಬಸಪ್ಪ, ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ನಿರ್ದೇಶಕ ಚಂದ್ರಗೌಡ, ಜಿಲ್ಲಾ ವಿಸ್ತ್ತರಣಾ ಘಟಕದ ಮುಖ್ಯಸ್ಥ ಕೆ.ಹೆಚ್. ಗೌಡ, ಗೋಣಿಕೊಪ್ಪಲು ಕೆವಿಕೆ ಮುಖ್ಯಸ್ಥ ಸಾಜು ಜಾರ್ಜ್ ಹಾಗೂ ಸಸ್ಯ ತಜ್ಞ ವೀರೇಂದ್ರ ಕುಮಾರ್ ಇದ್ದರು.