ಮಡಿಕೇರಿ, ಮಾ. 23: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿಗೆ ಒಳಪಟ್ಟ 18 ಗ್ರಾಮ ಪಂಚಾಯಿತಿ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಜನಪ್ರತಿನಿಧಿಗಳ ಸಭೆಯು ಬೆಟ್ಟಗೇರಿಯ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ ತಾ. 23ರಂದು ತಾಲೂಕು ಅಧ್ಯಕ್ಷ ತಳೂರು ಕಿಶೋರ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಂಬರುವ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚಿಸಿ ಇತ್ತೀಚೆಗೆ ವೀರಾಜಪೇಟೆಯಲ್ಲಿ ಕೆಲವರು ವೀರಾಜಪೇಟೆ ತಾಲೂಕಿಗೆ ಪ್ರಾತಿನಿಧ್ಯ ಹಾಗೂ ಕೊಡವರಿಗೆ ಟಿಕೆಟ್ ಕೊಡಬೇಕು ಎಂಬ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು.ಕೆಳಕಂಡ ವಿಷಯಗಳ ಬಗ್ಗೆ ಟಿಪ್ಪಣಿ ಮಾಡಲಾಯಿತುಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಾತಿನಿಧ್ಯ ಅಥವಾ ಜಾತೀವಾರು ಚಿಂತನೆ ಮಾಡಿಲ್ಲ. ಬಿಜೆಪಿ ಸೂಕ್ತ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಬಂದಿದೆ. ವೀರಾಜಪೇಟೆಯ ಕೆಲವು ಸ್ವ ಹಿತಾಸಕ್ತಿಗಳು, ತಾಲೂಕಿಗೆ 65 ವರ್ಷಗಳಿಂದ ಪ್ರಾತಿನಿಧ್ಯ ಸಿಕ್ಕಿರುವದಿಲ್ಲ ಎಂಬ ಹೇಳಿಕೆ ಶುದ್ಧ ಸುಳ್ಳಾಗಿದೆ, ವೀರಾಜಪೇಟೆ ಪ್ರತ್ಯೇಕ ಮೀಸಲು ಕ್ಷೇತ್ರವಾಗಿದ್ದಾಗ ಪಕ್ಷವು ವೀರಾಜಪೇಟೆಯಿಂದ ಹಿರಿಯರನ್ನು ಗೌರವಿಸಿ ಮಡಿಕೇರಿ ತಾಲೂಕಿಗೆ ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿತ್ತು. 1978ರ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ತಾಲೂಕಿನ ಅಜ್ಜಿಕುಟ್ಟಿರ ಸುಬ್ಬಯ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. 1983ರಲ್ಲಿ ಅಂದಿನ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದ ವೀರಾಜಪೇಟೆಯ ಡಾ. ಮುಕ್ಕಾಟಿರ ಎಂ. ಚಂಗಪ್ಪ ಅವರಿಗೆ ಟಿಕೆಟ್ ನೀಡಲಾಗಿತ್ತು. ಎರಡೂ ಸಂದರ್ಭದಲ್ಲಿಯೂ ಅವತ್ತಿನ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2 ಅಭ್ಯರ್ಥಿಗಳಿಗೆ ಅತ್ಯಂತ ಹೆಚ್ಚಿನ ಬಹುಮತವನ್ನು ನೀಡಲಾಗಿತ್ತು. ಆದರೆ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ವೀರಾಜಪೇಟೆ ತಾಲೂಕಿನ ಸಂಬಂಧಪಟ್ಟ 5 ಗ್ರಾಮಗಳು (ಸಿದ್ದಾಪುರ, ಮಾಲ್ದಾರೆ, ಪಾಲಿಬೆಟ್ಟ, ಅಮ್ಮತ್ತಿ, ಚೆನ್ನಯ್ಯನಕೋಟೆ ಸೇರಿಕೊಂಡಿದ್ದು, ಈ ವಿಭಾಗದ ಮತ ಎಣಿಕೆಯ ಸಂದರ್ಭದಲ್ಲಿ ನಾವು ಸೋಲನ್ನು ಕಾಣುತ್ತಿದ್ದೆವು.
ಕೊಡಗಿನ ಇತಿಹಾಸದಲ್ಲಿ ಎಲ್ಲ ಪಕ್ಷಗಳಿಂದಲೂ ವೀರಾಜಪೇಟೆ ತಾಲೂಕಿನವರಿಗೆ ಮಡಿಕೇರಿ, ಸೋಮವಾರಪೇಟೆಗಳಲ್ಲಿ ಪ್ರಾತಿನಿಧ್ಯ ಕೊಡಲಾಗಿದೆ. ಎ.ಪಿ. ಅಪ್ಪಣ್ಣ ಮಡಿಕೇರಿಯಿಂದ 3 ಬಾರಿ, ಎ.ಎಂ. ಬೆಳ್ಯಪ್ಪ ಸೋಮವಾರಪೇಟೆಯಿಂದ 2 ಬಾರಿ ಆಯ್ಕೆ, ವೀರಾಜಪೇಟೆಯ ಎ.ಕೆ. ಸುಬ್ಬಯ್ಯನವರನ್ನು 2 ಬಾರಿ ಬಿಜೆಪಿಯಿಂದ ಎಂ.ಎಲ್.ಸಿ. ಮಾಡಲಾಗಿತ್ತು. ಒಂದು ಬಾರಿ ಮಂಗಳೂರು ಕೊಡಗು ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ 1977ರಲ್ಲಿ ಟಿಕೆಟ್ ನೀಡಲಾಗಿತ್ತು.
ಕೊಡಗಿನ ಪ್ರಜ್ಞಾವಂತ ಮತದಾರರು ಇಲ್ಲಿಯ ತನಕ ಜಾತಿ ಹಾಗೂ ಪ್ರಾದೇಶಿಕ ವಿಚಾರಗಳಿಗೆ ಮನ್ನಣೆ ಕೊಟ್ಟಿರುವದಿಲ್ಲ.
ಪ್ರಸ್ತುತ ಬಿಜೆಪಿಯ ಹಾಲಿ ಶಾಸಕ ಕೆ.ಜಿ. ಬೋಪಯ್ಯ