ಸೋಮವಾರಪೇಟೆ,ಮ.23: ರಸ್ತೆ ಬದಿ ಬಿದ್ದು ಸಿಕ್ಕಿದ ಹಣವನ್ನು ಅದರ ವಾರಸುದಾರರಿಗೆ ಹಿಂತಿರುಗಿಸಿ ಶಿಕ್ಷಕರೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.
ತೋಳೂರುಶೆಟ್ಟಳ್ಳಿ ಶಾಲೆಯ ಶಿಕ್ಷಕ ಕೆಂಪರಾಜು ಅವರಿಗೆ ಮೊನ್ನೆ ದಿನ ರಸ್ತೆ ಬದಿ 2,740 ರೂಪಾಯಿ ಬಿದ್ದು ಸಿಕ್ಕಿದೆ. ನೋಟುಗಳ ನಡುವೆ ಇದ್ದ ರಶೀದಿಯಲ್ಲಿ ಬಜೆಗುಂಡಿ ಗ್ರಾಮದ ಡಿ. ಪೂವಪ್ಪ ಎಂಬವರ ಹೆಸರಿದ್ದು, ಅದನ್ನು ಪತ್ರಿಕಾಭವನಕ್ಕೆ ತಲುಪಿಸಿದ್ದರು. ಹಣದ ವಾರಸುದಾರರನ್ನು ಪತ್ತೆಹಚ್ಚಿನ ನಂತರ ಇಂದು ಪತ್ರಿಕಾಭವನದಲ್ಲಿ ಬಜೆಗುಂಡಿ ಗ್ರಾಮದ ಪೂವಪ್ಪ ಅವರಿಗೆ ಹಣವನ್ನು ಹಸ್ತಾಂತರಿಸಲಾಯಿತು. ಕಳೆದುಕೊಂಡಿದ್ದ ಹಣವನ್ನು ಕೆಂಪರಾಜು ಅವರಿಂದ ಪೂವಪ್ಪ ಮರಳಿ ಪಡೆದರು.