ವೀರಾಜಪೇಟೆ, ಮಾ:23 ತಿತಿಮತಿಯ ಬಳಿಯ ಹೆಬ್ಬಾಲೆ ಭದ್ರಗೊಳ ಗ್ರಾಮದ ಬೆಳ್ಯಪ್ಪ ಎಂಬವರ ತೋಟದ ಲೈನು ಮನೆಯಲ್ಲಿ ವಾಸವಿದ್ದ ಮಹದೇವಸ್ವಾಮಿ ಎಂಬಾತನ ತನ್ನ ಪತ್ನಿ ಮಲ್ಲಿಕಾ ಎಂಬಾಕೆಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಆರೋಪಕ್ಕಾಗಿ ಇಲ್ಲಿನ ಅಪರ ಹಾಗೂ ಎರಡನೇ ಸೆಷನ್ಸ್ ನ್ಯಾಯಾಧೀಶ ಮೋಹನ್‍ಪ್ರಭು ಅವರು ಜೀವಾವಧಿ ಶಿಕ್ಷೆ ಹಾಗೂ ರೂ. 5000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕಳೆದ ತಾ. 21-5-2017ರಂದು ಕೆಲಸ ಮುಗಿಸಿ ರಾತ್ರಿ 7ಗಂಟೆಗೆ ಮನೆಗೆ ಬಂದ ಮಹದೇವಸ್ವಾಮಿ ಮದ್ಯಪಾನ ಮಾಡಲು ಪತ್ನಿಯನ್ನು ಹಣಕ್ಕೆ ಪೀಡಿಸುತ್ತಿದ್ದನು. ಆಕೆ ಹಣ ಕೊಡಲು ನಿರಾಕರಿಸಿದಾಗ ಹಲ್ಲೆ ನಡೆಸಿ ಹೊರಗೆ ಹೋದವನು. ಮತ್ತೆ ಮನೆಗೆ ಬಂದ ಮಹದೇವಸ್ವಾಮಿ ಪತ್ನಿ ಇನ್ನೂ ಜೀವಂತವಾಗಿರುವದನ್ನು ನೋಡಿ ಮನೆಯ ಮೂಲೆಯಲ್ಲಿದ್ದ ಭಾರೀ ಗಾತ್ರದ ದೊಣ್ಣೆಯಿಂದ ತಲೆಗೆ ಹೊಡೆದಾಗ ಆಕೆ ಅಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಅದೇ ಗ್ರಾಮದ ಮಹೇಶ್ ಎಂಬವರು ಪೊನ್ನಂಪೇಟೆ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ರಾದ ಮೋಹನ್‍ಪ್ರಭು ಅವರು ರೂ. ಹೋದವನು. ಮತ್ತೆ ಮನೆಗೆ ಬಂದ ಮಹದೇವಸ್ವಾಮಿ ಪತ್ನಿ ಇನ್ನೂ ಜೀವಂತವಾಗಿರುವದನ್ನು ನೋಡಿ ಮನೆಯ ಮೂಲೆಯಲ್ಲಿದ್ದ ಭಾರೀ ಗಾತ್ರದ ದೊಣ್ಣೆಯಿಂದ ತಲೆಗೆ ಹೊಡೆದಾಗ ಆಕೆ ಅಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಅದೇ ಗ್ರಾಮದ ಮಹೇಶ್ ಎಂಬವರು ಪೊನ್ನಂಪೇಟೆ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ರಾದ ಮೋಹನ್‍ಪ್ರಭು ಅವರು ರೂ.