ಮಡಿಕೇರಿ, ಮಾ. 23: ಕುಶಾಲನಗರದಲ್ಲಿ ಇತ್ತೀಚೆಗೆ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ, ಕುಶಾಲನಗರ ಪಟ್ಟಣ ಪಂಚಾಯಿತಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಹಾಗೂ ವಿವಿಧ ಶಾಲಾ ಇಕೋ ಕ್ಲಬ್, ಕುಶಾಲನಗರ ಸರ್ಕಾರಿ ಪ್ರೌಢಶಾಲೆಯ ಪೊಲೀಸ್ ಕೆಡೆಟ್ (ಎಸ್.ಪಿ.ಸಿ.) ವತಿಯಿಂದ ವಿಶ್ವ ಜಲ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಆಂದೋಲನ ನಡೆಸಲಾಯಿತು. ನೀರಿನ ಮಿತ ಬಳಕೆ ಮತ್ತು ನೀರಿನ ಸಂರಕ್ಷಣೆ ಹಾಗೂ ಜೀವನದಿ ಕಾವೇರಿ ಸಂರಕ್ಷಣೆ ಕುರಿತು ಜಾಥಾದಲ್ಲಿ ಜಾಗೃತಿ ಮೂಡಿಸಲಾಯಿತು. ನಂತರ ಕಾವೇರಿ ನದಿಗೆ ತೆರಳಿದ ವಿದ್ಯಾರ್ಥಿಗಳು ನದಿಯಲ್ಲಿ ನೀರು ಕಲುಷಿತಗೊಂಡಿದ್ದು, ನದಿ ನೀರಿಲ್ಲದೆ ಭಣಗುಟ್ಟುತ್ತಿರುವದನ್ನು ವೀಕ್ಷಿಸಿದರು. ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು.