ಗುಡ್ಡೆಹೊಸೂರು, ಮಾ. 23: ಇಲ್ಲಿನ ಹಿತರಕ್ಷಣಾ ಯೂತ್ ಕ್ಲಬ್ನ ಸದಸ್ಯರು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣ ಮತ್ತು ಶಾಲಾ ಹೊರ ಭಾಗವನ್ನು ಶ್ರಮದಾನದ ಮೂಲಕ ಸರಿಪಡಿಸಿದರು. ಗುಡ್ಡೆ ಹೊಸೂರು ಹಿತರಕ್ಷಣಾ ಸಮಿತಿ ಎಂಬ ಸಮಿತಿಯು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕೆಲವು ಸಾರ್ವಜನಿಕ ಸಮಸ್ಯೆಗಳನ್ನು ಸಾಮಾಜಿಕ ಜಾಲ ತಾಣದ ಮೂಲಕ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ಕಾರ್ಯವನ್ನು ಕೂಡ ಮಾಡುತ್ತಿದೆ. ಈ ಸಮಿತಿಯಿಂದ ತಾ. 30, 31 ಮತ್ತು ಏಪ್ರಿಲ್ 1 ರಂದು ರಾಜ್ಯಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯವನ್ನು ಏರ್ಪಡಿಸಲಾಗಿದೆ. ಸಮಿತಿ ಅಧ್ಯಕ್ಷರಾಗಿ ಪಂಚಾಯಿತಿ ಸದಸ್ಯ ಶಶಿಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ.