ಸೋಮವಾರಪೇಟೆ,ಮಾ.23: ಕಳೆದ 8 ತಿಂಗಳ ಕಾಲ ತಹಸೀಲ್ದಾರ್‍ರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಹುಣಸೂರು ತಾಲೂಕಿಗೆ ವರ್ಗಾವಣೆಗೊಂಡಿರುವ ಪಿ.ಎಸ್.ಮಹೇಶ್ ಅವರನ್ನು ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಟ್ಟರು.ಈ ಸಂದರ್ಭ ಮಾತನಾಡಿದ ತಹಸೀಲ್ದಾರ್ ಮಹೇಶ್ ಅವರು, 94ಸಿ, 94ಸಿಸಿ, ನಮೂನೆ 53ರಲ್ಲಿ ನಿಯಮದಂತೆ ಹಕ್ಕುಪತ್ರ ನೀಡಿರುವದು ತೃಪ್ತಿ ತಂದಿದೆ. ಕೆಲವರನ್ನು ಹೊರತುಪಡಿಸಿದರೆ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಉತ್ತಮ ಸಹಕಾರ ಸಿಕ್ಕಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಭಾರ ತಹಸೀಲ್ದಾರ್ ಬಸವರಾಜ್, ಉಪ ತಹಸೀಲ್ದಾರ್ ಶಶಿಧರ್, ಸಿಬ್ಬಂದಿ ಅರುಣ್ ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.