ಮಡಿಕೇರಿ, ಮಾ. 23: ಗಾಳಿಬೀಡುವಿನ ಕ್ಲಬ್ ಮಹೇಂದ್ರ ಬಳಿಯ ನಿವಾಸಿ ಈರಯ್ಯ ಎಂಬವರ ಮನೆಯಿಂದ ಜೋಡಿ ನಳಿಕೆಯ ಕೋವಿ ಕಳ್ಳತನ ನಡೆದಿರುವ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಈರಯ್ಯ ಹಾಗೂ ಮನೆಯವರು ಬಾಗಿಲಿಗೆ ಬೀಗಹಾಕಿ ಬೇರೆಡೆಗೆ ತೆರಳಿದ್ದು, ಹಿಂತಿರುಗಿ ಬಂದು ನೋಡಲಾಗಿ ತಾವು ರಹಸ್ಯವಾಗಿ ಇರಿಸಿದ್ದ ಕೀಲಿಕೈ ಬಳಸಿಕೊಂಡು ಕಳ್ಳ ಕೋವಿಯನ್ನು ಒಯ್ಯುವದರೊಂದಿಗೆ ಮನೆ ಬಾಗಿಲನ್ನು ಹಾಗೆಯೇ ಬೀಗ ಹಾಕಿ ತೆರಳಿರುವದು ಗೋಚರಿಸಿದೆ. ಆ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.