ತಾ.26ರಂದು ಕುತ್ತುನಾಡು ಉರೂಸ್

ಪೊನ್ನಂಪೇಟೆ, ಮಾ. 23: ಸೌಹಾರ್ದತೆಯ ಸಂಕೇತವಾಗಿ ಎಮ್ಮೆಮಾಡಿನ ಸೂಫಿ ಶಹೀದ್ ಅವರ ಹೆಸರಿನಲ್ಲಿ ವರ್ಷಂಪ್ರತಿ ಜರುಗುವ ಕುತ್ತುನಾಡು ಉರೂಸ್ ತಾ. 26ರಂದು ಜರುಗಲಿದೆ. ಬಿ.ಶೆಟ್ಟಿಗೇರಿ ಸಮೀಪದ ಕೊಂಗಣದ ‘ನಾಡುಗುಂಡಿ’ ಹೊಳೆದಡದಲ್ಲಿರುವ ಕುತ್ತುನಾಡು ಸೂಫಿ ಶಹೀದ್ ಅವರ ಸ್ಮಾರಕ ಬಿಡಾರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಾತಿ-ಮತಗಳ ಭೆÉೀದವಿಲ್ಲದೆ ಜನರು ಭಾಗವಹಿಸಿ ಸಹೋದರತೆಗೆ ಸಾಕ್ಷಿಯಾಗಲಿದ್ದಾರೆ. ಉರೂಸ್‍ನ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಸೌಹಾರ್ದ ಸಮ್ಮೇಳನವೂ ನಡೆಯಲಿದೆ ಎಂದು ಆಲೀರ ಮತ್ತು ಕರ್ತೂರ ಕುಟುಂಬಸ್ಥರ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.