ಮಡಿಕೇರಿ, ಮಾ.22: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೆಡ್ ರಿಬ್ಬನ್, ರೆಡ್ ಕ್ರಾಸ್, ರಾ.ಸೇ.ಯೋಜನಾ ಗಟಕದ ವತಿಯಿಂದ ತಾ. 24 ರಂದು ಬೆಳಿಗ್ಗೆ 10.30ಗಂಟೆಗೆ ನಗರದ ಸ.ಪ್ರ ದರ್ಜೆ ಕಾಲೇಜು ಆವರಣದಲ್ಲಿ ರಕ್ತದಾನ ಮತ್ತು ನೋಂದಣಿ ಶಿಬಿರ ನಡೆಯಲಿದೆ.

ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲ ಪ್ರೊ.ಚಿತ್ರಾ.ವೈ. ರಕ್ತ ನಿಧಿ ಅಧಿಕಾರಿ ಡಾ.ಕರುಂಬಯ್ಯ.ಕೆ.ಪಿ, ರಕ್ತದಾನಿ ಮತ್ತು ಸಮಾಜ ಸೇವಕರಾದ ಹಿದಾಯತ್ ಉಲ್ಲಾ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದಯಾನಂದ, ಇತರರು ಭಾಗವಹಿಸಲಿದ್ದಾರೆ.