ಕೂಡಿಗೆ, ಮಾ. 22 : ಕೋವರ್‍ಕೊಲ್ಲಿಯಿಂದ ಕೂಡಿಗೆವರೆಗೆ 18 ಕೋಟಿ ರೂ ವೆಚ್ಚದಲ್ಲಿ ನಡೆದ ರಸ್ತೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಉದ್ಘಾಟಿಸಿದರು.ಕಾಮಗಾರಿಯು ಶೇ.70 ರಷ್ಟು ಮಾತ್ರ ಮುಗಿದಿದ್ದು, ಇನ್ನೂ ಕೋವರ್‍ಕೊಲ್ಲಿಯಿಂದ ಕೂಡಿಗೆವರೆಗೆ ಚಿಕ್ಕ ಸೇತುವೆ, ಚರಂಡಿ ವ್ಯವಸ್ಥೆ ಹಾಗೂ ಇನ್ನಿತರ ಕಾಮಗಾರಿ ಮಾಡಲು ಇದ್ದರೂ ಸಹ ಕಾಮಗಾರಿ ಪೂರ್ಣ ಗೊಂಡಿದೆ ಎಂದು ಉಸ್ತುವಾರಿ ಸಚಿವರು ಉದ್ಘಾಟನೆಗೆ ಆಗಮಿಸಿದ ಸಂದರ್ಭ ಸ್ಥಳೀಯ ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣಿಪ್ರಸಾದ್, ತಾಲ್ಲೂಕು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕೃಷ್ಣಪ್ಪ,ವಿವಿಧ ಘಟಕಗಳ ಬಿಜೆಪಿ ವಿವಿಧ ಘಟಕದ ಕಾರ್ಯಕರ್ತರು ದಿಕ್ಕಾರ ಕೂಗಿದ ಪ್ರಸಂಗ ನಡೆಯಿತು. ಇದ್ಯಾವದನ್ನೂ ಲೆಕ್ಕಿಸದೆ ಉಸ್ತುವಾರಿ ಸಚಿವರು ರಸ್ತೆಯನ್ನು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾಮಗಾರಿಯ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇನೆ. ಇನ್ನುಳಿದ ಸಣ್ಣ ಕಾಮಗಾರಿಗಳನ್ನು ಈ ವಾರದಲ್ಲೇ ಮುಗಿಸುವಂತೆ ಸಂಬಂಧಪಟ್ಟವರಿಗೆ ಸ್ಥಳದಲ್ಲೇ ಸೂಚಿಸಿದ್ದೇನೆ. ಕಾಮಗಾರಿ ಮುಗಿಸಿ ಕೂಡಿಗೆ ಯಿಂದ ಸೋಮವಾರಪೇಟೆಗೆ ತೆರಳುವ ಮಾರ್ಗ ಸುಗಮವಾಗುವಂತೆ ನೋಡಿಕೊಳ್ಳಲಾಗುವದು ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅದ್ಯಕ್ಷೆ ಲಕ್ಷ್ಮಿ,

(ಮೊದಲ ಪುಟದಿಂದ) ಸದಸ್ಯರಾದ ಫಿಲೋಮಿನ, ಕಾಂಗ್ರೆಸ್ ಮುಖಂಡರು ಹಾಗೂ ವಕೀಲರಾದ ಚಂದ್ರಮೌಳಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಇದ್ದರು. ಕುಶಾಲನಗರ ಡಿವೈಎಸ್‍ಪಿ ಶ್ರೀನಿವಾಸ್ ನೇತೃತ್ವದಲ್ಲಿ ಕುಶಾಲನಗರ ಗ್ರಾಮಾಂತರ, ಕುಶಾಲನಗರ ವೃತ್ತ ನಿರೀಕ್ಷಕರು, ನಗರ ಠಾಣಾಧಿಕಾರಿ ಹಾಗೂ ಸೋಮವಾರಪೇಟೆ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.