ಮಡಿಕೇರಿ ಮಾ.22 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗದ ನೂತನ ಅಧ್ಯಕ್ಷರನ್ನಾಗಿ ಡಿ.ಕೆ.ವಸಂತ್ ಅವರನ್ನು ಆಯ್ಕೆ ಮಾಡಿ ರಾಜ್ಯ ವಿಭಾಗದÀ ಅಧ್ಯಕ್ಷರಾದ ಕೆ.ಪಿ.ಪಾಲಯ್ಯ ಆದೇಶ ಹೊರಡಿಸಿದ್ದಾರೆ.

ಅಲ್ಲದೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ವಿ.ಕೆ.ಸತೀಶ್ ಕುಮಾರ್ ತಿಳಿಸಿದ್ದಾರೆ.

ಉಪಾಧ್ಯಕ್ಷರುಗಳಾಗಿ ಪಿ.ಸಿ.ಬೆಳ್ಳಯ್ಯ, ರಾಜಮ್ಮ ರುದ್ರಯ್ಯ, ಕಾರ್ಯದರ್ಶಿಯಾಗಿ ಎಸ್.ವಿ.ವಿಶ್ವನಾಥ್, ಗಾಯತ್ರಿ ನರಸಿಂಹ, ಜಿಲ್ಲಾ ಸಂಚಾಲಕ ಬೆಲ್ಲರು ಕೃಷ್ಣಪ್ಪ ಹಾಗೂ 22 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಸೋಮವಾರಪೇಟೆಯ ಬ್ಲಾಕ್ ಅಧ್ಯಕ್ಷರಾಗಿ ಟಿ.ಎಫ್. ಸುರೇಶ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷರಾಗಿ ಹೆಚ್.ಬಿ. ಉಮೇಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರಾಗಿ ಹೆಚ್.ಸಿ. ಪೊನ್ನಪ್ಪ, ಮಡಿಕೇರಿ ಬ್ಲಾಕ್ ಅಧ್ಯಕ್ಷರಾಗಿ ಗೌತಮ್ ಶಿವಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾಗಿ ಮುರುಗನ್ ಅವರನ್ನು ನೇಮಿಸಲಾಗಿದೆ.