ವೀರಾಜಪೇಟೆ, ಮಾ. 22: ಹಿಂದೂ ಧರ್ಮದ ಪ್ರತೀಕವಾದ ಹೊಸ ಸಂವತ್ಸರದ ಯುಗಾದಿ ಆಚರಣೆಯನ್ನು ಸುಣ್ಣದ ಬೀದಿಯಲ್ಲಿರುವ ಪೌರ ಕಾರ್ಮಿಕ ವಸತಿ ಗೃಹದಲ್ಲಿರುವ ನಿವಾಸಿಗಳಿಗೆ ಬೇವು ಬೆಲ್ಲ ನೀಡುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಿಲಾಯಿತು.

ವೀರಾಜಪೇಟೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಗರ ಶಾಖೆಯ ವತಿಯಿಂದ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲ ಆಂಜನೇಯ ದೇವಾಲಯದಲ್ಲಿ ಯುಗಾದಿ ಹಬ್ಬದ ಕುರಿತು ಮತ್ತು ಸಂಘದ ಸಂಸ್ಥಾಪಕರಾದ ಡಾ. ಕೇಶವ್ ಬಲಿರಾಮ್ ಹೆಗಡೆವಾರ್‍ರವರ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹ ಡಾಲಿ ಅವರು ಮಾತನಾಡುತ್ತಾ. ಹಿಂದೂ ಧರ್ಮವು ಹಲವು ಜಾತಿ ಮತ ಧರ್ಮಗಳ ಸಂಘಟನಾತ್ಮಕವಾದ ಸಂಕೀರ್ಣ, ಹಿಂದೂ ಧರ್ಮದ ಸಂಸ್ಕøತಿಯು ಪುರಾತನ ಪರಂಪರಾಗತವಾದ ಪ್ರಕೃತಿದತ್ತ ನೆಲೆಗಳನ್ನು ಕಂಡುಕೊಂಡ ಧೀಮಂತ ಸಂಸ್ಕøತಿ; ಪುರಾತನ ಕಾಲದಲ್ಲಿ ಪ್ರಕೃತಿಯಲ್ಲಿ ನಡೆಯುವ ಬದಲಾವಣೆಗಳನ್ನು ಅನುಸರಿಸಿಕೊಂಡು ಕಾಲವನ್ನು ನಿಗದಿ ಮಾಡಲಾಗುತ್ತಿತ್ತು. ಪ್ರಕೃತಿಯೊಂದಿಗೆ ಸಂಸ್ಕøತಿಯು ಲೀನವಾಗಿ ಹೊಸ ಚಿಗುರು ಬರುವ ಕಾಲವನ್ನು ಹೊಸ ಸಂವತ್ಸರವೆಂದು ತಿಳಿದುಕೊಂಡಿದ್ದರು. ಅಂದಿನಿಂದ ಹೊಸ ಯುಗವು ಪ್ರಾರಂಭವಾಯಿತು ಎನ್ನಲಾಗಿದೆ ಹಿಂದೂ ಧರ್ಮದ ಭೌವ್ಯ ಪರಂಪರೆಯು ಹೊಸ ವರ್ಷವನ್ನು ಯುಗಾದಿ ಹಬ್ಬವೆಂದು ಆಚರಿಸಲಾಗುತ್ತಿದೆ; ಯುವ ಪೀಳಿಗೆಯು ಕ್ಯಾಲೆಂಡರ್‍ನ ಮೊದಲ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳದೆ ಯುಗಾದಿ ದಿನವನ್ನು ಹೊಸ ವರ್ಷ ಆಚರಣೆ ಮಾಡಬೇಕು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಸಂಘಚಾಲಕ್ ಪ್ರಿನ್ಸ್ ಗಣಪತಿ ಅಧ್ಯಕ್ಷತೆ ವಹಿಸಿ

ಪ್ರಕೃತಿದತ್ತ ನೆಲೆಗಳನ್ನು ಕಂಡುಕೊಂಡ ಧೀಮಂತ ಸಂಸ್ಕøತಿ; ಪುರಾತನ ಕಾಲದಲ್ಲಿ ಪ್ರಕೃತಿಯಲ್ಲಿ ನಡೆಯುವ ಬದಲಾವಣೆಗಳನ್ನು ಅನುಸರಿಸಿಕೊಂಡು ಕಾಲವನ್ನು ನಿಗದಿ ಮಾಡಲಾಗುತ್ತಿತ್ತು. ಪ್ರಕೃತಿಯೊಂದಿಗೆ ಸಂಸ್ಕøತಿಯು ಲೀನವಾಗಿ ಹೊಸ ಚಿಗುರು ಬರುವ ಕಾಲವನ್ನು ಹೊಸ ಸಂವತ್ಸರವೆಂದು ತಿಳಿದುಕೊಂಡಿದ್ದರು. ಅಂದಿನಿಂದ ಹೊಸ ಯುಗವು ಪ್ರಾರಂಭವಾಯಿತು ಎನ್ನಲಾಗಿದೆ ಹಿಂದೂ ಧರ್ಮದ ಭೌವ್ಯ ಪರಂಪರೆಯು ಹೊಸ ವರ್ಷವನ್ನು ಯುಗಾದಿ ಹಬ್ಬವೆಂದು ಆಚರಿಸಲಾಗುತ್ತಿದೆ; ಯುವ ಪೀಳಿಗೆಯು ಕ್ಯಾಲೆಂಡರ್‍ನ ಮೊದಲ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳದೆ ಯುಗಾದಿ ದಿನವನ್ನು ಹೊಸ ವರ್ಷ ಆಚರಣೆ ಮಾಡಬೇಕು ಎಂದರು.