ಶನಿವಾರಸಂತೆ, ಮಾ. 21: ಸ್ಥಳೀಯ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಸುಂಕ ಎತ್ತಾವಳಿ ಹಾಗೂ ಹಂದಿ ಮಾಂಸ ಮಾರಾಟದ ಹಕ್ಕಿನ ಬಹಿರಂಗ ಮರು ಹರಾಜು ಸಭೆ ಪಂಚಾಯಿತಿ ಅಧ್ಯಕ್ಷ ಎಂ.ಎಚ್. ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆರಂಭವಾದರೂ ಮತ್ತೆ ಮುಂದೂಡಲ್ಪಟ್ಟಿತು.

ಪಂಚಾಯಿತಿ ಆಡಳಿತ ಮಂಡಳಿ ಸಂತೆ ಸುಂಕ ಎತ್ತಾವಳಿ ಯನ್ನು ರೂ. 8.25 ಲಕ್ಷಕ್ಕೆ ನಿಗದಿಪಡಿಸಿತ್ತು. ಆದರೆ, ಬಿಡ್ಡುದಾರರು ರೂ. 5.55 ಲಕ್ಷಕ್ಕೆ ಬಿಡ್ ಮಾಡಿದರು. ಹಂದಿ ಮಾಂಸ ಮಾರಾಟದ ಹಕ್ಕನ್ನು ಪಂಚಾಯಿತಿ ರೂ. 1.87 ಲಕ್ಷಕ್ಕೆ ನಿಗದಿಪಡಿಸಿತ್ತು. ಬಿಡ್ಡುದಾರರು 61 ಸಾವಿರಕ್ಕೆ ಬಿಡ್ ಮಾಡಿದರು. ಪಂಚಾಯಿತಿಗೆÀ ನಷ್ಟವಾಗುವದು ಎಂಬ ಕಾರಣಕ್ಕೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು. ತಾ. 26 ರಂದು ಮುಚ್ಚಿದ ಲಕೋಟೆ ಮೂಲಕ ಹರಾಜು ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿತು. ಎಎಸ್‍ಐ ಶಿವಣ್ಣ, ಪೊಲೀಸ್ ಸಿಬ್ಬಂದಿ ವಿಶ್ವನಾಥ್, ಪಂಚಾಯಿತಿ ಸದಸ್ಯರು, ಪಿಡಿಓ ಧನಂಜಯ್, ಕಾರ್ಯದರ್ಶಿ ತಮ್ಮಯ್ಯಾಚಾರ್, ಲೆಕ್ಕಾಧಿಕಾರಿ ಆರಣಪ್ಪ ಸನದಿ, ಬಿಲ್ ಸಂಗ್ರಾಹಕ ವಸಂತ್, ಸಿಬ್ಬಂದಿ ಫೌಜಿಯಾ, ರಮೇಶ್, ಶಿವಕುಮಾರ್, ಸುರೇಶ್ ಉಪಸ್ಥಿತರಿದ್ದರು.