ಮಡಿಕೇರಿ, ಮಾ. 21: ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಿಂದ ವಿಕಲ ಚೇತನರಿಗೆ ಗಾಲಿ ಕುರ್ಚಿ ವಿತರಣೆ ಕಾರ್ಯಕ್ರಮ ನಿಗದಿಯಾಗಿತ್ತು.ಮಧ್ಯಾಹ್ನ 3.30 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಒಂದು ಗಂಟೆ ತಡವಾಗಿ ನಡೆಯಿತು. ಗಾಲಿ ಕುರ್ಚಿ ಪಡೆಯಬೇಕಿದ್ದ 9 ಫಲಾನುಭವಿಗಳು 3.30 ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕುರ್ಚಿಯಲ್ಲಿ ಆಸೀನರಾಗಿ ಸಚಿವರ ಬರುವಿಕೆಗಾಗಿ ಎದುರು ನೋಡುತ್ತಿದ್ದರು. ಒಂದು ಗಂಟೆ ತಡವಾಗಿ ಸಚಿವರ ಆಗಮನವೂ ಆಯಿತು...ಬಿರಬಿರನೆ ಬಂದ ಸಚಿವರು ಗಾಲಿ ಕುರ್ಚಿ ಫಲಾನುಭವಿಗ ಳೊಂದಿಗೆ ನಿಂತು ಛಾಯಾಚಿತ್ರಕ್ಕೆ ಫೋಜ್ ಕೊಟ್ಟು ಕ್ರೀಡಾ ಇಲಖೆಯಿಂದ ಹತ್ತು ಯುವಕ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಿ ದರು. ಈ ಸಂದರ್ಭ ಸಚಿವರೊಂದಿಗೆ ಎಂಎಲ್‍ಸಿ ವೀಣಾ ಅಚ್ಚಯ್ಯ, ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ, ಪಕ್ಷದ ಮುಖಂಡ ಚಂದ್ರಮೌಳಿ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಅಧಿಕಾರಿಗಳು ಇದ್ದರು.
ಕ್ರೀಡಾ ಸಾಮಗ್ರಿ ವಿತರಿಸಿ ಮುನ್ನಡೆಯುತ್ತಿದ್ದಂತೆ ಅಲ್ಲಿಗೆ ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‍ಸಿ ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಇತರರು ಬಂದಿಳಿದರು. ಈ ಸಂದರ್ಭ ಸುನಿಲ್ ಸುಬ್ರಮಣಿ ಅವರು ಸಚಿವರನ್ನು ಕುರಿತು ‘ನಾವು ಬರುವ ಮುಂಚೆಯೇ ಎಲ್ಲಾ ಕೊಟ್ಟು ಮುಗ್ಸಿದ್ರಿ; ನಾವ್ ಬೇಡ್ವಾ ನಿಮ್ಗೆ’? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ನಾನ್ ಬರೋ ಟೈಮ್ಗೆ ಫಲಾನು ಭವಿಗಳು ತಯಾರಾಗಿ ನಿಂತಿದ್ರು; ಆದ್ರಿಂದ ಕೊಟ್ಟೆ, ಬನ್ನಿ ಒಂದು ಫೋಟೋ
(ಮೊದಲ ಪುಟದಿಂದ) ತೆಗ್‍ಸ್ಕೊಳೋಣ ಬನ್ನಿ ಬೋಪಯ್ಯ ಅವರೆ’ ಎಂದು ಕರೆದೊಯ್ದು ಸುನಿಲ್ ಹಾಗೂ ಕೆಜಿಬಿ ಮತ್ತಿತರರೊಂದಿಗೆ ಮತ್ತೊಮ್ಮೆ ಛಾಯಾಚಿತ್ರ ತೆಗೆಸಿ ಕೊಂಡರು. ಆ ಹೊತ್ತಿಗಾಗಲೇ ಬಹುತೇಕ ಫಲಾನುಭವಿಗಳು ಗಾಲಿ ಕುರ್ಚಿಯೊಂದಿಗೆ ಅಲ್ಲಿಂದ ತೆರಳಿದ್ದರು. ನಂತರ ಚಾಲಕರಿಗೆ ಅಪಘಾತ ಕಿಟ್, ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.