ಗೋಣಿಕೊಪ್ಪ ವರದಿ, ಮಾ. 21: ಮಡಿವಾಳ ಯೂತ್ ಮತ್ತು ಮಡಿವಾಳರ ಸಂಘ ಗೋಣಿಕೊಪ್ಪ ಶಾಖೆ ವತಿಯಿಂದ ತಾ. 25 ರಂದು ಹಾತೂರಿನ ಫೀ.ಮಾ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ಮಡಿವಾಳ ಪ್ರೀಮಿಯರ್ ಲೀಗ್ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದು ಅಧ್ಯಕ್ಷ ಎಂ.ಬಿ. ಹರೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾಟ ನಾಲ್ಕು ಓವರ್‍ಗಳಿಗೆ ಸೀಮಿತವಾಗಿದೆ. ಮಡಿವಾಳ ಜನಾಂಗದ ಎಲ್ಲಾ ಭಾಷಿಕರು ಪಂದ್ಯಾಟದಲ್ಲಿ ಭಾಗವಹಿಸಬಹುದು. ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿದೆ ಎಂದು ಹೇಳಿದರು.

ಪಂದ್ಯಾಟದ ಉದ್ಘಾಟನೆ ಬೆಳಿಗ್ಗೆ 10.30 ಕ್ಕೆ ನೆರವೇರಲಿದೆ. ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ನಂಜಪ್ಪ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ಆಸಕ್ತರು 87629 28704, 99725 18325 ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಪೊನ್ನಂಪೇಟೆ ಮಡಿವಾಳ ಯೂತ್ ಅಧ್ಯಕ್ಷ ರತನ್, ಕಾರ್ಯದರ್ಶಿ ಮಯೂರ್, ಸದಸ್ಯರುಗಳಾದ ಚರಣ್ ಹಾಗೂ ಮದನ್ ಇದ್ದರು.