ಮಡಿಕೇರಿ, ಮಾ. 20: ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯಕ್ಕೆ ದೇಣಿಗೆ ನೀಡಿದ ವಿವರ ನೀಡುವಂತೆ ಜಿನ್ನು ನಾಣಯ್ಯ ಎಂಬವರು ಕೇಳಿದ್ದಾರೆ. ನಾವು ಈ ಹಿಂದೆಯೇ ಇದರ ವಿವರ ನೀಡಿದ್ದೇವೆ ಎಂದು ಭಕ್ತ ಜನ ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಆಡಳಿತ ಮಂಡಳಿ ತಾ. 1.1.2009ರಲ್ಲಿ ಆಯ್ಕೆಗೊಂಡಿತು. ಅಲ್ಲಿಂದ ತಾ. 20.3.2018ರ ವರೆಗೆ ಭಕ್ತಾದಿಗಳಿಂದ ದೇಣಿಗೆ ರೂಪದಲ್ಲಿ ಬಂದ ಒಟ್ಟು ಹಣ ರೂ. 2,15,00,542, ತಾ. 14.11.2017ರಲ್ಲಿ ಭಕ್ತ ಜನಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಆಗ ಲೆಕ್ಕ ಪರಿಶೋಧನಾ ವರದಿಯೂ ಅಂಗೀಕಾರಗೊಂಡಿತ್ತು. ಈ ಬಗ್ಗೆ ತಾ. 15.11.2017ರ ‘ಶಕ್ತಿ’ಯಲ್ಲಿ ದಾನಿಗಳಿಂದ ನೀಡಲ್ಪಟ್ಟ ದೇಣಿಗೆ, ಅನುದಾನ ಮತ್ತು ಕಾಣಿಕೆ ಹಣದ ಮಾಹಿತಿ ಹಾಗೂ ದೇವಾಲಯ ಅಭಿವೃದ್ಧಿಗೆ ಖರ್ಚಾಗಿದ್ದ ವಿವರ ಮಾಹಿತಿಗಳನ್ನು ನೀಡಲಾಗಿತ್ತು. ಈ ಬಗ್ಗೆ ಇನ್ನೂ ಮಾಹಿತಿ ಬೇಕಾದಲ್ಲಿ ಸಂಘದ ಕಚೇರಿಯಲ್ಲಿ ಲಭ್ಯವಿರುವದಾಗಿ ಭಕ್ತಜನ ಸಂಘ ಆಡಳಿತ ಮಂಡಳಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದೆ.