ಗಾಳಿಬೀಡು ಗ್ರಾಮದ ಕೊಂಬಾರನ ದಿ. ಕುಟ್ಟಪ್ಪ ಅವರ ಪತ್ನಿ ಬೆಳ್ಯವ್ವ (ಕಮಲ-76 ತಾಮನೆ ಕರೆಮನೆ) ಅವರು ತಾ. 20 ರಂದು ನಿಧನರಾದರು. ಮೃತರು ಐವರು ಮಕ್ಕಳನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 21 ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.

*ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯ ನಿವಾಸಿ ಹಾಜಿ ಕೆ.ಎಫ್. ಅಬ್ದುಲ್ ಗಫೂರ್ (90) ಅವರು ತಾ. 19 ರಂದು ನಿನ್ನೆ ಬೆಳಿಗ್ಗೆ ನಿಧನ ಹೊಂದಿದರು. ಸ್ಥಳೀಯ ಜಾಮಿಯಾ ಮಸೀದಿಯ ಮುತವಲ್ಲಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು 6 ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.