ಸೋಮವಾರಪೇಟೆ,ಮಾ.20: ಸಮೀಪದ ಕೆಂಚಮ್ಮನಬಾಣೆಯ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಯುವಕ ಸಂಘದ ವತಿಯಿಂದ ತಾ. 25ರಂದು ಕೆಂಚಮ್ಮನಬಾಣೆ ಮೈದಾನದಲ್ಲಿ 2ನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಪಿ. ದಿನೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರಿಗಾಗಿ ಆಯೋಜಿ ಸಿರುವ ಕಬಡ್ಡಿ ಪಂದ್ಯಾಟ ದಲ್ಲಿ ವಿಜೇತರಾಗುವ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. 30 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 15 ಸಾವಿರ ಹಾಗೂ ಆಕರ್ಷಕ ಟ್ರೋಫಿ, ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ತಲಾ ರೂ. 3,500 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವದು. ಅತ್ಯುತ್ತಮ ಆಟ ಪ್ರದರ್ಶಿಸುವವರಿಗೆ ವೈಯಕ್ತಿಕ ಬಹುಮಾನಗಳನ್ನು ಕೊಡಲಾಗುವದು ಎಂದರು.

ಸಂಘದ ಕ್ರೀಡಾಧ್ಯಕ್ಷ ನಂದಕುಮಾರ್ ಮಾತನಾಡಿ, 16 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. 3 ಸಾವಿರ ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 1,500 ಹಾಗೂ ಟ್ರೋಫಿಯನ್ನು ನೀಡಲಾ ಗುವದು. ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಹಾಗೂ ಶಾಲಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದರು.

ಸಂಘದ ಕಾರ್ಯದರ್ಶಿ ಎಂ.ಎನ್. ಸದಾನಂದ ಮಾತನಾಡಿ, ಅಂಗನವಾಡಿ ಮಕ್ಕಳಿಗೆ ಆಟೋಟ ಸ್ಪರ್ಧೆಗಳು ಹಾಗೂ ಮಹಿಳೆಯರಿಗೆ ಸಂಗೀತಕುರ್ಚಿ, ರಂಗೋಲಿ ಹಾಗೂ ವಿಷದ ಚೆಂಡು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪಂದ್ಯಾಟದ ಅಂಗವಾಗಿ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪಂದ್ಯಾಟವು ಅಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದ್ದು ತಂಡಗಳು 9 ಗಂಟೆಯೊಳಗೆ ಹೆಸರು ನೋಂದಾ ಯಿಸಿಕೊಳ್ಳಬೇಕು. ಸಂಜೆ 4 ಗಂಟೆಗೆ ರಾಜ್ಯಮಟ್ಟದ ಹೊನಲು-ಬೆಳಕಿನ ಪಂದ್ಯಾಟ ಆರಂಭವಾಗಲಿದ್ದು ಅಂದು ಅಪರಾಹ್ನ 12 ಗಂಟೆಯೊಳಗೆ ತಂಡಗಳ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.9686015596ರಲ್ಲಿ ಸಂಪರ್ಕಿ ಸಬಹುದು ಎಂದರು.

ಗೋಷ್ಠಿಯಲ್ಲಿ ಕ್ರೀಡಾ ಉಪಾಧ್ಯಕ್ಷ ಸುದರ್ಶನ್, ಸಂಘದ ಉಪಾಧ್ಯಕ್ಷ ದಿವಾಕರ್, ಖಜಾಂಚಿ ರಾಮು ಹಾಗೂ ಸಲಹೆಗಾರ ಜಗದೀಶ್ ಉಪಸ್ಥಿತರಿದ್ದರು.