ಶನಿವಾರಸಂತೆ, ಮಾ. 20: ಮಡಿಕೇರಿ ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸುತ್ತಿರುವ ಜೆಡಿಎಸ್ ವಿಕಾಸ ಪರ್ವದ ರಥಯಾತ್ರೆ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಶನಿವಾರ ಆಗಮಿಸಿದಾಗ ಜೆಡಿಎಸ್ ಮುಖಂಡರು ಭವ್ಯ ಸ್ವಾಗತ ನೀಡಿದರು. ಈ ಸಂದರ್ಭ ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಎಂ.ಎ. ಆದಿಲ್ ಪಾಶ, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಿ.ಪಿ. ಬೋಜಪ್ಪ, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಸ್. ಚೆನ್ನಬಸಪ್ಪ, ಮುಖಂಡರಾದ ಬಿ.ಎನ್. ಮುತ್ತೇಗೌಡ, ಎನ್.ಕೆ. ಅಪ್ಪಸ್ವಾಮಿ, ಆನಂದ್, ರಾಜಪ್ಪ, ನಾಝಿಮ್ ಪಾಶ, ಬಿ.ಎಂ. ಪ್ರಕಾಶ್, ಚಿಕ್ಕಣ್ಣ, ಅಯ್ಯಣ್ಣಿ, ರಾಜ್, ಗಿರಿ, ಜಗದೀಶ್, ಪೃಥ್ವಿ, ಸಂದೀಪ್, ದಿನೇಶ್ ಹಾಜರಿದ್ದರು.