ವೀರಾಜಪೇಟೆ ಮಾ. 20: ವೀರಾಜಪೇಟೆಯಲ್ಲಿರುವ ಕೊಡಗು ಮಹಿಳಾ ಸಹಕಾರ ಸಂಘದಿಂದ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ತಾ. 21ರಂದು (ಇಂದು) ಅಪರಾಹ್ನ 2 ಗಂಟೆಗೆ ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷೆ ಕುಸುಮಾ ಸೋಮಣ್ಣ ತಿಳಿಸಿದ್ದಾರೆ.