ಪೊನ್ನಂಪೇಟೆಯಲ್ಲಿ ಮರ ಸಂಪನ್ಮೂಲ ಬಗ್ಗೆ ಪ್ರಬಂಧ ಮಂಡನೆ

ಗೋಣಿಕೊಪ್ಪ ವರದಿ, ಮಾ. 20 : ಭವಿಷ್ಯದ ಸುಸ್ಥಿರತೆಗಾಗಿ ಮರ ಸಂಪನ್ಮೂಲಗಳ ಸೃಷ್ಟಿ ಸಂರಕ್ಷಣೆ ನಿರ್ವಹಣೆ ಮತ್ತು ಬಳಕೆಯಲ್ಲಿ ಇತ್ತೀಚಿನ ಆವಿಷ್ಕಾರಗಳ ಕುರಿತು ರಾಷ್ಟ್ರೀಯ ಸಮ್ಮೇಳನ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ತಾ 21 (ಇಂದು) ಹಾಗೂ 22 ರಂದು ನಡೆಯಲಿದೆ.

ರಾಷ್ಟ್ರೀಯ ಸಮ್ಮೇಳನದಲ್ಲಿ 150 ತಂತ್ರಜ್ಞರು ಹಾಗೂ ವಿಜ್ಞಾನಿಗಳು ಮರ ಸಂಪನ್ಮೂಲಗಳ ಬಗ್ಗೆ ಸಂಶೋಧನಾ ಫಲಿತಾಂಶವನ್ನು ಮಂಡಿಸಲಿದ್ದಾರೆ ಮತ್ತು ಮರ ವಿಜ್ಞಾನ ಕುರಿತಾದ ಪ್ರಸ್ತುತ ಸಂಶೋಧನೆಗಳು ಮುಂದೆ ಕೈಗೊಳ್ಳಬೇಕಾದ ಸಂಶೊಧನೆಗಳ ಬಗ್ಗೆ ದಿಕ್ಸೂಚಿ ಭಾಷಣ ನೀಡಲಿದ್ದಾರೆ.

ಸಮ್ಮೇಳನದ ದ್ವಿತೀಯ ದಿನ ನಡೆಯಲಿರುವ ವಿಸ್ತøತ ಚರ್ಚೆಯಲ್ಲಿ ಮರ ಸಂಪನ್ಮೂಲಗಳ ಸುಸ್ಥಿರತೆಗಾಗಿ ಕೈಗೊಳ್ಳಬೇಕಾಗಿರುವ ಸಂಶೋಧನೆ, ವಿಸ್ತರಣೆ ಮತ್ತು ಶೈಕ್ಷಣಿಕ ಕ್ರಮಗಳ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಉಪಪ್ರದಾನ ಮುಖ್ಯ ಅರಣ್ಯ ಸಂರಕ್ಷಕ ಡಾ. ಬಿ.ಪಿ ರವಿ ಉದ್ಘಾಟಿಸಲಿದ್ದಾರೆ. ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ್ ಎಸ್.ಕೆ ಗಾಳಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಮತ್ತು ತಮಿಳುನಾಡು ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಪಾರ್ಥೀಬನ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.