ಕುಶಾಲನಗರ, ಮಾ. 20: ಕುಶಾಲನಗರದ ಎಕ್ಸಿಸ್ ಬ್ಯಾಂಕ್‍ನ ಎದುರು ಮಹಿಳೆಯ ಶವ ಪತ್ತೆಯಾಗಿದ್ದು, ಮೃತ ಮಹಿಳೆಯು ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದಲ್ಲಿ ವಾಸವಿರುವ ಅಲೆಮಾರಿ ಜನಾಂಗದ ಹಕ್ಕಿ-ಪಿಕ್ಕಿ ಜನಾಂಗ ದವರೆಂದು ತಿಳಿದುಬಂದಿದೆ. ಈ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ವಾರಸುದಾರರು ಸಿಕ್ಕಿದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಒಪ್ಪಿಸಲಾಗುವದೆಂದು ಪೋಲೀಸರು ತಿಳಿಸಿದ್ದಾರೆ.
ಮೃತದೇಹ ಪತ್ತೆ
* ಗ್ರಾಮದ ಮುಕ್ಕಾಟೀರ ಪೊನ್ನಪ್ಪ ಎಂಬವರ ಗದ್ದೆಯಲ್ಲಿ ಅಂದಾಜು ಪ್ರಾಯ 40-45 ವರ್ಷದ ಅಪರಿಚಿತ ಗಂಡಸ್ಸಿನ ಮೃತದೇಹ ಪತ್ತೆಯಾಗಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.