ಮಡಿಕೇರಿ, ಮಾ. 19: ಭಾರತೀಯ ಸಂಸ್ಕøತಿಯ ಹೊಸ ಹಬ್ಬವಾದ ಚಾಂದ್ರಮಾನ ಯುಗಾದಿ ಹಬ್ಬವನ್ನು ನಾಡಿನ ಜನತೆ ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆಯಿಂದಲೇ ಮನೆ - ಮನಗಳಲ್ಲಿ, ದೇವಾಲಯಗಳಲ್ಲಿ ವಿಶೇಷ ಪೂಜೆಯೊಂದಿಗೆ ‘ಬೇವು - ಬೆಲ್ಲ’ ಸವಿಯುವದರೊಂದಿಗೆ ‘ಸಿಹಿ- ಕಹಿ’ಯನ್ನು ಸಮನಾಗಿ ಸ್ವೀಕಾರ ಮಾಡಿ, ತಿಂಡಿ, ತಿನಿಸುಗಳನ್ನು ಮೆದ್ದು ಸಂಭ್ರಮ ಹಂಚಿಕೊಂಡರು. ಯುಗಾದಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜಾದಿ ಕಾರ್ಯಗಳನ್ನು ಹಮ್ಮಿಕೊಂಡಿದ್ದರೆ, ವಿವಿಧೆಡೆ ಸಂಘ- ಸಂಸ್ಥೆಗಳು ಕೂಡ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದವು. ಉತ್ತರ ಕೊಡಗಿನ ತೊರೆನೂರು ಹಾಗೂ ಕೂಡ್ಲೂರಿನಲ್ಲಿ ‘ಹೊನ್ನಾರು’ ಉತ್ಸವ ವಿಜೃಂಭಿಸಿತು. ಕೂಡಿಗೆ : ಸಮೀಪದ ತೊರೆನೂರು ಗ್ರಾಮದಲ್ಲಿ ತೊರೆನೂರು ದೇವಾಲಯ ಸಮಿತಿಯ ವತಿಯಿಂದ ಸಂಭ್ರಮದ ಹೊನ್ನಾರು ಉತ್ಸವ ನಡೆಯಿತು. ಸಾಂಪ್ರಾದಾಯಿಕವಾಗಿ ಯುಗಾದಿ ಹಬ್ಬದ ದಿನದಂದು ಗ್ರಾಮಸ್ಥರು ಒಂದೆಡೆ ಸೇರಿ ವರ್ಷದ ಹೊಸ ಪಂಚಾಂಗ ನೋಡಿದ ನಂತರ ಹೊನ್ನಾರು (ಚಿನ್ನದ ಸಾಲು) ಉತ್ಸವ ಆಚರಣೆಗೆ ಸಿದ್ಧರಾಗಿ ಗ್ರಾಮದಲ್ಲಿರುವ ಜೋಡಿ ಎತ್ತುಗಳನ್ನು ಸಿಂಗರಿಸಿ ದೇವಾಲಯ ಆವರಣಕ್ಕೆ ಬಂದು ಶ್ರೀ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ದೇವರ ಭೂಮಿಯಲ್ಲಿ ಸಾಂಪ್ರಾದಾಯಿಕದಂತೆ ಪೂರ್ವದಿಂದ ಪಶ್ಚಿಮಕ್ಕೆ ಜೋಡೆತ್ತಿನ ಮೂಲಕ ದೇವಾಲಯದ ಅರ್ಚಕ ಟಿ.ಎಲ್. ಸೋಮಶೇಖರ್ ಪೂಜೆ ಸಲ್ಲಿಸಿದ ನಂತರ ಉತ್ಸವ ಚಾಲನೆಗೊಂಡಿತು.

ಉತ್ಸವದಲ್ಲಿ ಗ್ರಾಮದ 50 ಕ್ಕೂ ಅಧಿಕ ಜೋಡಿ ಎತ್ತುಗಳು ಸಿಂಗಾರಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ತೊರೆನೂರು ಗ್ರಾಮದ ಸಮೀಪವಿರುವ ರಾಜ್ಯ ಹೆದ್ದಾರಿಯ ಸನಿಹದಲ್ಲಿರುವ ಜೋಡಿ ಬಸವೇಶ್ವರನಿಗೆ ಪೂಜೆ ಸಲ್ಲಿಸಿ, ನಂತರ ಅವರವರ ಜಮೀನುಗಳಿಗೆ ತೆರಳಿ ಹೊನ್ನಾರು ಉಳುಮೆ ಮಾಡುವದರ ಮೂಲಕ ಸಾಂಪ್ರದಾಯಿಕ ಜಮೀನಿನ ಉಳುಮೆಗೆ ಚಾಲನೆ ನೀಡಲಾಯಿತು.

ಈ ಪದ್ಧತಿಯನ್ನು ಕಳೆದ 50 ವರ್ಷಗಳಿಂದಲೂ ಈ ಗ್ರಾಮದಲ್ಲಿ ವೈಭವದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮವು ತಳಿರು ತೋರಣಗಳಿಂದ ಸಿಂಗಾರಗೊಂಡು ಮಹಿಳೆಯರು ಗ್ರಾಮದ ಬೀದಿಗಳಲ್ಲಿ ವಿವಿಧ ರಂಗೋಲಿಗಳ ಮೂಲಕ ಹೊನ್ನಾರು ಉತ್ಸವವನ್ನು ಸ್ವಾಗತಿಸಿದರು.

ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ.ಪಾಂಡುರಂಗ, ಕಾರ್ಯದರ್ಶಿ ಶಿವಾನಂದ, ಖಜಾಂಚಿ ಟಿ.ವಿ.ಜಗದೀಶ್ ಸೇರಿದಂತೆ ಸಮಿತಿಯ ನಿರ್ದೇಶಕರು, ನೂರಾರು ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಕೂಡ್ಲೂರು : ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಸಡಗರ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಈ ವ್ಯಾಪ್ತಿಯ ಶಿರಂಗಾಲ, ಹೆಬ್ಬಾಲೆ, ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಗಳ ಗ್ರಾಮಗಳಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಯಿತು.

ಯುಗಾದಿ ಹಬ್ಬದ ಪ್ರಮುಖ ಭಾಗವಾದ ಹೊನ್ನಾರು ಉತ್ಸವವು ಕೂಡ್ಲೂರು ಗ್ರಾಮದಲ್ಲಿ

ಕುಶಾಲನಗರ

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ನಾಗರಿಕರು ಹಾಹಾಕಾರ ಪಡುವ ಪರಿಸ್ಥಿತಿ ಉಂಟಾಗಿದೆ. ನದಿಯಲ್ಲಿ ನೀರಿನ ಕೊರತೆ ಎದುರಾದ ಹಿನೆÀ್ನಲೆಯಲ್ಲಿ ಪಟ್ಟಣದ ಕೆಲವು ಬಡಾವಣೆಗಳಿಗೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಒದಗಿಸಲು ಕ್ರಮ ಕೈಗೊಂಡಿದ್ದಾರೆ.

ಯುಗಾದಿ ದಿನದಂದು ನೀರಿನ ಅಭಾವ ಉಂಟಾದ ಹಿನೆÀ್ನಲೆಯಲ್ಲಿ ಕೆಲವು ಬಡಾವಣೆಗಳಿಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ನೇತೃತ್ವದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಯಿತು. ಪಟ್ಟಣದ ಬಹುತೇಕ ಬಡಾವಣೆಗಳ ನಾಗರಿಕರು ಸ್ವಂತ ಕೊಳವೆ ಬಾವಿ (ಮೊದಲ ಪುಟದಿಂದ) ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಅದ್ದೂರಿಯಾಗಿ ನೆಡೆಯಿತು.

ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಪೂಜೆ ನಡೆಸಿ, ರೈತರು ತಮ್ಮ ಎತ್ತುಗಳಿಗೆ ಮತ್ತು ಉಳುಮೆ ಬಳಸುವ ಸಲಕರಣೆಗಳಿಗೆ ಪೂಜೆ ನೇರವೇರಿಸಿ, ದೇವಾಲಯ ಸಮಿತಿಗೆ ಸೇರಿದ ಜಮೀನಿನಲ್ಲಿ ಮೊದಲು ಹೊನ್ನಾರಿನ ಸಾಲು ಹೊಡೆಯಲಾಯಿತು.

ನಂತರ ಬಸವೇಶ್ವರ ದೇವಾಲಯದ ಆವರಣದಲ್ಲಿ ದೇವರ ಮೂರ್ತಿಗೆ ಪೂಜಾ ಕೈಂಕರ್ಯಗಳು ನಡೆದವು. ಸಂಜೆ ಹಬ್ಬದ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಜವರೇಗೌಡ, ಕಾರ್ಯದರ್ಶಿ ಪವನ್ ಕುಮಾರ, ರಾಜಾಚಾರಿ, ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಈರಪ್ಪ, ಕೆ.ಜೆ ಮಂಜುನಾಥ, ಗ್ರಾಮದ ಪ್ರಮುಖರಾದ ಕೆ.ಎನ್. ಲಕ್ಷ್ಮಣರಾಜಅರಸ್, ಚನ್ನಪ್ಪ, ವಿಶ್ವ, ರಾಜು, ರಾಮು ಸೇರಿದಂತೆ ಹಲವಾರು ಗ್ರಾಮಸ್ಥರು ಹಾಗೂ ರೈತರು ಭಾಗವಹಿಸಿದ್ದರು.

ಮಡಿಕೇರಿ

ಯುಗಾದಿ ಹಬ್ಬದ ಅಂಗವಾಗಿ ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಭಕ್ತರಿಗೆ ಬೇವು - ಬೆಲ್ಲದೊಂದಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ವಿಜಯ ವಿನಾಯಕ, ದೃಷ್ಟಿಗಣಪತಿ, ಓಂಕಾರೇಶ್ವರ, ಕೋಟೆ ಗಣಪತಿ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು. ಇಲ್ಲಿನ ಸುದರ್ಶನ ಅತಿಥಿಗೃಹದ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ನಿನ್ನೆಯಿಂದ ವಿಶೇಷ ಪೂಜಾದಿ ಕಾರ್ಯಗಳು ನಡೆದು ಇಂದು ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು. ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ಭಾಗಮಂಡಲ

ಭಾಗಮಂಡಲ ತಲಕಾವೇರಿ ದೇವಾಲಯದಲ್ಲಿ ಯುಗಾದಿ ಉತ್ಸವವನ್ನು ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು .

ಚಾಂದ್ರಮಾನ ಯುಗಾದಿ ಪ್ರಯುಕ್ತ್ತ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಶ್ರೀ ಮಹಾಗಣಪತಿ ಮೂಡಪ್ಪ ಸೇವೆ, ಶ್ರೀ ಭಗಂಡೇಶ್ವರ ಮಹಾವಿಷ್ಣು ಹಾಗೂ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ಶ್ರೀ ಮಹಾಗಣಪತಿ ಅಥರ್ವ ಶ್ರೀಸ್ರ ದೂರ್ವಾರ್ಚನೆ, ಶ್ರೀ ಅಗಸ್ತೇಶ್ವರ ಸನ್ನಿದಿಯಲ್ಲಿ ರುದ್ರಾಭೀಷೇಕ, ಶ್ರೀ ಮೂಲ ಕಾವೇರಿ ಸನ್ನಿದಿಯಲ್ಲಿ ಸಹಸ್ರ ನಾಮಾರ್ಚನೆ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು

ನೆರೆದಿದ್ದ ಭಕ್ತಾದಿಗಳು ದೇವರ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು . ಕಾರ್ಯಕ್ರಮದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸಮಿತಿಯ ಸದಸ್ಯರಾದ ಉದಿಯಂಡ ಸುಭಾಷ್, ನಿಡ್ಯಮಲೆ ಮೀನಾಕ್ಷಿ, ಕೆ. ಅಣ್ಣಯ್ಯ, ಪಾರುಪತ್ತೆಗಾರ ಕೊಂಡಿರ ಪೊನ್ನಣ್ಣ ಮುಂತಾದವರು ಪಾಲ್ಗೊಂಡಿದ್ದರು.

ಸೋಮವಾರಪೇಟೆ

ಸೋಮವಾರಪೇಟೆಯಾದ್ಯಂತ ಯುಗಾದಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿದವು.

ಮನೆಗಳಲ್ಲಿ ಬೇವು-ಬೆಲ್ಲದ ಮಿಶ್ರಣ ತಯಾರಿಸಿ ನೆರೆಕರೆಯವರಿಗೆ ವಿತರಿಸುವ ಮೂಲಕ ಯುಗಾದಿ ಹಬ್ಬದ ಶುಭಾಶಯ ಕೋರಿದರು. ಸಮೀಪದ ಹಳ್ಳದಿಣ್ಣೆ ಗ್ರಾಮದಲ್ಲಿ ಯುಗಾದಿ ಪ್ರಯುಕ್ತ ಶ್ರೀ ಮುನೇಶ್ವರ ದೇವರ ವಾರ್ಷಿಕ ಮಹಾ ಪೂಜೋತ್ಸವ, ವಿವಿಧ ಕ್ರೀಡಾ ಕೂಟಗಳನ್ನು ಆಯೋಜಿಸಲಾಗಿತ್ತು.

ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಹೂವು, ಬೇವಿನ ಎಲೆಗಳ ಮಾರಾಟ ಭರ್ಜರಿಯಾಗಿತ್ತು. ಇಲ್ಲಿನ ಗಣಪತಿ ದೇವಾಲಯ, ಬಸವೇಶ್ವರ, ಸೋಮೇಶ್ವರ, ಮುತ್ತಪ್ಪ ಸ್ವಾಮಿ, ಅಯ್ಯಪ್ಪ ಸ್ವಾಮಿ, ಗಾಂಧಿನಗರದ ದೊಡ್ಡಮಾರಿಯಮ್ಮ, ಯಡೂರು ಸೋಮೇಶ್ವರ, ಕಟ್ಟೆ ಬಸವೇಶ್ವರ ಸೇರಿದಂತೆ ಗ್ರಾಮೀಣ ಭಾಗದ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಕುಶಾಲನಗರ

ಯುಗಾದಿ ಹಬ್ಬದ ಅಂಗವಾಗಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ನೂತನ ಸಂವತ್ಸರವನ್ನು ಸಾಂಪ್ರದಾಯಿಕ ಪೂಜೆ ಪುನಸ್ಕಾರ ಗಳೊಂದಿಗೆ ಬರಮಾಡಿ ಕೊಳ್ಳ ಲಾಯಿತು. ಕುಶಾಲನಗರದ ವಿವಿಧ ದೇವಾಲಯಗಳಲ್ಲಿ ಯುಗಾದಿ ಅಂಗವಾಗಿ ಹೆಚ್ಚಿನ ಭಕ್ತಾದಿಗಳು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡ ದೃಶ್ಯ ಗೋಚರಿಸಿತು.

ಸಮೀಪದ ಬೈಲುಕೊಪ್ಪೆಯಲ್ಲಿ ದೊಡ್ಡಮ್ಮ ದೇವರು ಹಾಗೂ ಬಸವೇಶ್ವರ ಪ್ರತಿಮೆಗಳ ಮೆರವಣಿಗೆ ಕುಶಾಲನಗರ ಕಾವೇರಿ ನದಿ ತನಕ ತೆರಳಿ ಪೂಜೆ ಸಲ್ಲಿಸುವ ಮೂಲಕ ಅಲ್ಲಿನ ಗೆಳೆಯರ ಬಳಗದ ಸದಸ್ಯರು ಯುಗಾದಿ ಹಬ್ಬವನ್ನು ಆಚರಿಸಿದರು.

ವೀರಾಜಪೇಟೆ

ಭಾರತೀಯ ಪರಂಪರೆ, ಸಂಸ್ಕøತಿ ಪದ್ಧತಿಯನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಮುಂದಿನ ಯುವ ಪೀಳಿಗೆಗೆ ಇದನ್ನು ಪರಿಚಯಿಸಿ ಜಾಗೃತರಾದರೆ ಮಾತ್ರ ಶಾಶ್ವತವಾಗಿ ಉಳಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಹೇಳಿದರು.

ಜೀವನ ಜ್ಯೋತಿ ಟ್ರಸ್ಟ್ ವತಿಯಿಂದ ಇಲ್ಲಿನ ತೆಲುಗರಬೀದಿಯ ಅಂಗಾಳ ಪರಮೇಶ್ವರಿ ದೇವಾಲಯ ದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಕಲ್ಪ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಶಿ ಸುಬ್ರಮಣಿ ಅವರು ಹಿಂದೂ ಧರ್ಮದ ಪ್ರಕಾರ ಹಬ್ಬ ಹರಿದಿನಗಳನ್ನು ಒಮ್ಮತವಾಗಿ ಆಚರಿಸುವದರಿಂದ ಭಾರತೀಯ ಸಂಸ್ಕøತಿ ನಿರಂತರವಾಗಿ ಉಳಿಯಲಿದೆ. ಪ್ರತಿಯೊಂದು ಸಮುದಾಯಗಳಲ್ಲಿ ಈ ಆಚರಣೆ ಅಗತ್ಯ ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಮಲ್ಲಂಡ ಮಧುದೇವಯ್ಯ, ಪ್ರಸನ್ನ ತಮ್ಮಯ್ಯ, ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎಂ.ಶಶಿಧರ್, ಮತನಾಡಿದರು. ವೇದಿಕೆಯಲ್ಲಿ ಉದ್ಯಮಿ ಜೆ.ಎನ್. ಸಂಪತ್ ಕುಮಾರ್, ಶರಣು ರಿತೀಕ್, ಎಂ.ಎಂ.ಪರಮೇಶ್ವರ್, ಅನಿಲ್, ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಸಮಾಜ ಸೇವಕಿ ಸುಮತಿ ಎಂಬವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಟ್ರಸ್ಟ್‍ನ ಅಧ್ಯಕ್ಷ ಅಜಯ್ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‍ನ ಯುವರಾಜ್‍ಕೃಷ್ಣ ನಿರೂಪಿಸಿದರು. ಸಭೆಗೆ ಮೊದಲು ಮಾರಿಯಮ್ಮ ದೇವಾಲಯದಿಂದ ಮುಖ್ಯ ಬೀದಿಗಳಲ್ಲಿ ವಾಹನ ಜಾಥಾ ಏರ್ಪಡಿಸಲಾಗಿತ್ತು.

ಕೂಡಿಗೆ

ಕೂಡಿಗೆಯ ಶ್ರೀ ಉದ್ಭವ ಯುವಕ ಸಂಘದ ವತಿಯಿಂದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಪ್ರಾಯೋಜಕತ್ವದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಹಾಸನ ತಂಡ ಪ್ರಥಮ ಸ್ಥಾನ ಪಡೆದು 30,000 ರೂ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಕಾಡನೂರು ತಂಡ ಪಡೆದುಕೊಂಡಿದ್ದು, 15,000 ರೂ. ಹಾಗೂ ಟ್ರೋಫಿಯನ್ನು ಪಡೆದು ಕೊಂಡಿದೆ.

ಬಹುಮಾನ ವಿತರಣೆ ಮಾಡಿದ ನಾಪಂಡ ಎಂ. ಮುತ್ತಪ್ಪ ಮಾತ ನಾಡುತ್ತಾ, ಇಂತಹ ಕ್ರೀಡಾಕೂಟಗಳು ನಡೆಯುವದರಿಂದ ಸಹೋದರತ್ವ ಭಾವನೆ ಬೆಳೆಯುವದು ಹಾಗೂ ಗ್ರಾಮದ ಯುವಕರು ಒಂದೆಡೆ ಸೇರಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು, ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭ ಉದ್ಭವ ಯುವಕ ಸಂಘದ ಕಾರ್ಯದರ್ಶಿ ನಂದ ಕುಮಾರ್, ಕಾರ್ಯಕಾರಿ ಸಮಿತಿಯ ನಿರ್ದೇಶಕ ಆರ್. ರಮೇಶ್‍ಗೌಡ, ರಮೇಶ, ಬಿ.ಪಿ.ದಿನೇಶ, ವಿಜಯ್ ಕುಮಾರ್, ಪಾಪಚ್ಚ, ಆಶ್ರಫ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು.

ಕುಶಾಲನಗರ

ಪಂಚಾಯ್ತಿ ಪೌರಕಾರ್ಮಿಕರ ಕುಟುಂಬ ಸದಸ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶಾಶ್ವತ ಯೋಜನೆಗಳು ರೂಪುಗೊಳ್ಳು ವಂತಾಗಬೇಕೆಂದು ಬಿಎಸ್‍ಆರ್ ಗ್ರೂಪ್ಸ್‍ನ ಮುಖ್ಯಸ್ಥ ಡಿ.ಎಸ್. ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಯುಗಾದಿ ಹಬ್ಬದ ಅಂಗವಾಗಿ ಬಿಎಸ್‍ಆರ್ ಗ್ರೂಪ್ಸ್ ಸಂಸ್ಥೆಯ ಕಛೇರಿಯಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿಯ 39 ಪೌರಕಾರ್ಮಿಕರಿಗೆ ಬಟ್ಟೆÉ, ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದರು.

ಪಟ್ಟಣದ ಸ್ವಚ್ಛತೆ ಬಗ್ಗೆ ದಿನನಿತ್ಯ ಕಾರ್ಯೋನ್ಮುಖರಾಗುವ ಪೌರ ಕಾರ್ಮಿಕರ ಹಾಗೂ ಅವರ ಕುಟುಂಬ ಸದಸ್ಯರ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾಗಿದೆ ಎಂದರು. ಪೌರಕಾರ್ಮಿಕರಿಗೆ ಈಗಾಗಲೇ ತಲಾ ರೂ. 20 ಲಕ್ಷದಂತೆ ವಿಮಾ ಪಾಲಿಸಿ ನೀಡಿರುವದಾಗಿ ಜಗದೀಶ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಿ.ಜೆ. ಯಶೋಧ ಜಗದೀಶ್, ಡಾ.ಡಿ.ಜೆ. ಸುಷ್ಮಿತಾ, ಡಿ.ವಿ.ರಮೇಶ್, ಆರ್. ಬಾಬಣ್ಣ, ಡಿ.ಸಿ.ವೆಂಕಟೇಶ್, ವಿಜಯೇಂದ್ರ, ಡಿ.ಆರ್. ಸೋಮ ಶೇಖರ್ ಇದ್ದರು.

ಮರಗೋಡು

ಮರಗೋಡುವಿನ ಕಾನಡ್ಕ ಕಾರ್ಯಪ್ಪ ಇವರ ಆಶ್ರಯದಲ್ಲಿ 6ನೇ ವರ್ಷದ ಯುಗಾದಿ ಹಬ್ಬದ ಪ್ರಯುಕ್ತ ಆಟೋಟ ಸ್ಪರ್ಧೆಯನ್ನು ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಮರಗೋಡು ಗೌಡ ಸಮಾಜದ ಕಾರ್ಯದರ್ಶಿ ಮಗೇರನ ಬೆಳ್ಯಪ್ಪ ನೆರವೇರಿಸಿದರು. ಇಂತಹ ಕಾರ್ಯಕ್ರಮಗಳನ್ನು ನಡೆಸುವದರಿಂದ ಕುಟುಂಬದಲ್ಲಿ ಒಗ್ಗಟ್ಟು, ಶಾಂತಿ, ಸಹಬಾಳ್ವೆಯನ್ನು ನಡೆಸಲು ಸಾಧ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಬೆಪ್ಪುರನ ಅಶೋಕ್ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಕಾನಡ್ಕ ರಾಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ಕಾನಡ್ಕ ಆನಂದ, ದಾಮೋದರ, ಉಲ್ಲಾಸ ಉಪಸ್ಥಿತರಿದ್ದರು.

ಕಾನಡ್ಕ ಜಲಜಾಕ್ಷಿ ಪ್ರಾರ್ಥಿಸಿದರೆ, ಕಾನಡ್ಕ ಶ್ಯಾಮ್ ಸ್ವಾಗತಿಸಿ, ಕಾನಡ್ಕ ಹರೀಶ್ ನಿರೂಪಿಸಿ, ವಂದಿಸಿದರು.

ನಂತರ ಚಿಕ್ಕಮಕ್ಕಳಿಂದ - ಹಿರಿಯರವರೆಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ಕುಟುಂಬದವರು ಹಾಗೂ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅರೆಭಾಷೆ ಗೌಡ ಜನಾಂಗದ ಸಂಸ್ಕøತಿಯನ್ನು ಉಳಿಸಿ ಬೆಳೆಸುವದು ಇಂದಿನ ಯುವ ಜನಾಂಗದ ಜವಾಬ್ದಾರಿಯಾಗಿದೆ. ಜೊತೆಗೆ ಜನಾಂಗ ಬಾಂಧವರು ಇಂತಹ ಆಟೋಟ ಸ್ಪರ್ಧೆಗಳನ್ನು ಆಯೋಜಿಸು ವದು ಒಂದು ಉತ್ತಮ ಬೆಳವಣಿಗೆ ಯಾಗಿದೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಮರಗೋಡು ದವಸ ಭಂಡಾರದ ಕಾರ್ಯದರ್ಶಿ ಉಳುವಾರನ ಹೀರಾಲಾಲ್ ಆಗಮಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ತಿಲಕ್ ರಾಜ್ ಸ್ವಾಗತಿಸಿದರು.

- ಚಿತ್ರ, ವರದಿ : ನಾಗರಾಜ ಶೆಟ್ಟಿ, ಚಂದ್ರಮೋಹನ, ಕೆ.ಡಿ. ಸುನಿಲ್, ವಿಜಯ್ ಹಾನಗಲ್, ಡಿ.ಎಂ. ರಾಜ್‍ಕುಮಾರ್