ನಾಪೆÇೀಕ್ಲು, ಮಾ. 19: ಬೆಂಗಳೂರಿನ ಉದ್ಯಮಿ ವಿಶ್ವಜಿತ್ ಹರೀಶ್ ಮತ್ತು ರಕ್ಷಾ ವಿಶ್ವಜಿತ್ ದಂಪತಿ ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ಕಕ್ಕಬ್ಬೆ ಪಟ್ಟಣದಲ್ಲಿ ನಿರ್ಮಿಸುತ್ತಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ದ್ವಾರ ಮತ್ತು ಗೋಪುರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ದಾನಿಗಳಾದ ವಿಶ್ವಜಿತ್ ಹರೀಶ್, ರಕ್ಷಾ ವಿಶ್ವಜಿತ್, ಸಂತೋಷ್, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಉಪಾಧ್ಯಕ್ಷ ಮತ್ತು ದೇವತಕ್ಕ ಪರದಂಡ ಡಾಲಿ, ಮಾಜಿ ಅಧ್ಯಕ್ಷ ನಾಟೋಳಂಡ ಪೆÇನ್ನಪ್ಪ, ಕಲ್ಯಾಟಂಡ ಮುತ್ತಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ನಂಬಡಮಂಡ ಸುಬ್ರಮಣಿ, ಪೆÇನ್ನೋಲತಂಡ ಸೋಮಣ್ಣ, ಪೇರಿಯಂಡ ಸಾಬು, ಪೆÇಂಗೇರ ಉಲ್ಲಾಸ, ಭಕ್ತ ಜನಸಂಘದ ಅಧ್ಯಕ್ಷ ಕಾಳಿಂಗ, ಶಿಲ್ಪಿ ಮಹೇಶ್, ಗುತ್ತಿಗೆದಾರ ದಾದ ವೆಂಕಟೇಶ್, ಪ್ರಧಾನ ಅರ್ಚಕ ಕುಶಭಟ್, ಶ್ರೀಕಾಂತ ಹೆಬ್ಬಾರ್, ಗ್ರಾಮಸ್ಥರು ಮತ್ತಿತರು ಇದ್ದರು.