ವಿಮಲ್ಸ್ ತಂಡ ರನ್ನರ್ಸ್

ಮಡಿಕೇರಿ, ಮಾ. 19: ಈವ್ನಿಂಗ್ ಕ್ರಿಕೆಟರ್ಸ್ ವತಿಯಿಂದ ಪ್ರಥಮ ವರ್ಷದ ಇಸಿಸಿ ಟಿ20 ವೈಟ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಮ್ಯಾನ್ಸ್ ಕಾಂಪೌಂಡ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಸರಣಿಯಲ್ಲಿ ಜಿಲ್ಲೆಯ ಸುಮಾರು 18 ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಹಣಾಹಣಿಯಲ್ಲಿ ಎಂವೈಸಿಸಿ ತಂಡ ವಿಮಲ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿತು. ಎಂ.ವೈ.ಸಿ.ಸಿ. ತಂಡದ ಪ್ರಮಿತ್ ಪಂದ್ಯ ಪುರುಷೋತ್ತಮ, ಪ್ರಿನ್ಸ್ ಸರಣಿ ಶ್ರೇಷ್ಠ ಹಾಗೂ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು. ಬೆಸ್ಟ್ ಬೌಲರ್ ಆಗಿ ವಿಮಲ್ಸ್‍ನ ಇರ್ಫಾನ್, ಬೆಸ್ಟ್ ಫೀಲ್ಡರ್ ಆಗಿ ವಿಮಲ್ಸ್‍ನ ರೇಣು, ಆಲ್‍ರೌಂಡರ್ ಆಗಿ ಡಾಲ್ಫಿನ್ಸ್‍ನ ಪ್ರದೂಸ್, ಎಮರ್ಜಿಂಗ್ ಪ್ಲೇಯರ್ ಆಗಿ ಇಸಿಸಿ ತಂಡದ ಜತ್ತಿನ್, ಬೆಸ್ಟ್ ಕ್ಯಾಚರ್ ಆಗಿ ಇಸಿಸಿ ತಂಡದ ಸಚಿನ್, ಬೆಸ್ಟ್ ಕೀಪರ್ ಆಗಿ ಎಂವೈಸಿಸಿ ಮಧು ಉತ್ತಮ ತೀರ್ಪುಗಾರರಾಗಿ ಇಸಿಸಿ ತಂಡದ ಅರ್ಜುನ್ ಪ್ರಶಸ್ತಿ ಪಡೆದುಕೊಂಡರು. ಮುಖ್ಯ ಅತಿಥಿಗಳಾಗಿ ಟ್ರೈ ಕಲರ್ ಅಕಾಡೆಮಿಯ ಮುಖ್ಯಸ್ಥ ಗೌರವ್ ಪಾಟೀಲ್ ಹಾಗೂ ಸ್ಪೈಸಸ್ ಮಾಲ್‍ನ ಮಾಲೀಕ ಜುಬೈರ್ ಉಪಸ್ಥಿತರಿದ್ದರು.