ಮಡಿಕೇರಿ, ಮಾ. 19: ನಗರದ ಶ್ರೀ ಕೋದಂಡ ರಾಮ ದೇವಾಲಯದ ವತಿಯಿಂದ ತಾ. 25 ರಂದು ಶ್ರೀ ರಾಮನವಮಿ ಉತ್ಸವ ನಡೆಯಲಿದೆ.
ಅಂದು ಮುಂಜಾನೆ 5 ಗಂಟೆಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪುಷ್ಪ ಅಲಂಕಾರ ಮತ್ತು ವಸ್ತ್ರ ಅಲಂಕಾರ ಸೇವೆ.
8 ಗಂಟೆಗೆ ದೇವಾಲಯ ಆವರಣದಿಂದ ಉತ್ಸವ ಮೂರ್ತಿ ಹೊತ್ತ ರಥದೊಂದಿಗೆ ಕಳಶ ಹೊತ್ತ ಮಹಿಳೆಯರು, ಚಂಡೆ ವಾದ್ಯ ಮತ್ತು ಕಲಾ ತಂಡಗಳಿಂದ ಭಜನೆಯೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ.
ನಂತರ ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ಬಳಿಕ ಕೋಸಂಬರಿ ಪಾನಕ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.