ಮಡಿಕೇರಿ, ಮಾ. 16: ಶ್ರೀ ರಾಮೋತ್ಸವ ಸಮಿತಿ ಹಾಗೂ ಶ್ರೀ ಓಂಕಾರೇಶ್ವರ ದೇವಾಲಯ ವತಿಯಿಂದ ಇಲ್ಲಿನ ಓಂಕಾರ ಸದನದಲ್ಲಿ ತಾ. 18ರಿಂದ 26ರ ತನಕ 124ನೇ ವರ್ಷದ ಶ್ರೀ ರಾಮೋತ್ಸವ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ. ನಿತ್ಯ ಸಂಜೆ 6.30ರಿಂದ 9 ಗಂಟೆಯ ತನಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾ. 18ರಂದು ವಿದುಷಿ ಸೀತಾಲಕ್ಷ್ಮಿ ಅಪ್ಪಯ್ಯ ತಂಡದಿಂದ ಕರ್ನಾಟಕ ಸಂಗೀತ, ತಾ. 19ರಂದು ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ, ತಾ. 20ರಂದು ಬೆಂಗಳೂರಿನ ಸೀತಾರಾಂ ಮುನಿಕೋಟೆ ಹರಿಕಥೆ, ತಾ. 21ರಂದು ಮೈಸೂರಿನ ಎನ್. ಶ್ರೀನಾಥ್ ತಂಡದಿಂದ ಕರ್ನಾಟಕ ಸಂಗೀತ ನಡೆಯಲಿದೆ.

ತಾ. 22ರಂದು ಮಣಿಪಾಲದ ವಿದುಷಿ ಅರುಣಾ ಕುಮಾರಿ ವೀಣಾವಾದನ, ತಾ. 23ರಂದು ಮೈಸೂರಿನ ನಿತೀಶ್ ಭಾರದ್ವಾಜ್ ದಾಸರ ಪದಗಳು, ತಾ. 24ರಂದು ಶಿವಮೊಗ್ಗದ ಶಿವಾನಂದಸ್ವಾಮಿ ಹರಿಕಥೆ, ತಾ. 25ರಂದು ಶ್ರೀ ರಾಮ ನವಮಿಯೊಂದಿಗೆ ವಿಶೇಷ ಪೂಜೆ ನಡೆಯಲಿದೆ. ಅಂದು ಶ್ರೀ ಶಿವಶಕ್ತಿ ಮಹಿಳಾ ವೃಂದದಿಂದ ಬೆಳಿಗ್ಗೆ 10ರಿಂದ ಸ್ತೋತ್ರಪಠಣ ಹಾಗೂ ಸಂಜೆ ಚೆನ್ನೈನ ಅನಯಂಪಟ್ಟಿ ಗಣೇಶನ್ ತಂಡದಿಂದ ಜಲತರಂಗ ಹಾಗೂ ತಾ. 26ರಂದು ಹನುಮಂತೋತ್ಸವ ನೆರವೇರಲಿದೆ. ಆ ದಿನ ಬೆಳಿಗ್ಗೆ 10ರಿಂದ ಮುಕ್ತಾವಳಿ ದೇವರ ನಾಮ ಮತ್ತು ಸಂಜೆ ಶ್ರೀನಿಧಿ ಅವರಿಂದ ಭಗವದ್ಗೀತಾ ಸಾರಾಂಶ ಹಮ್ಮಿಕೊಳ್ಳಲಾಗಿದೆ.