ಚೆಟ್ಟಳ್ಳಿ, ಮಾ. 16: ಚೆಟ್ಟಳ್ಳಿ ವ್ಯಾಪ್ತಿಯ ಶ್ರೀಮಂಗಲ ಗ್ರಾಮದ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯು ಕಳೆದ ಮೂರು ವರ್ಷದಿಂದ ಪ್ರಗತಿಯಲ್ಲಿದ್ದು, ಈಗಾಗಲೇ ಅಂತಿಮ ಹಂತಕ್ಕೆ ತಲಪಿದೆ.
ಉದ್ಯಮಿ ನಾಪಂಡ ಮುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ಸುಮಾರು ಐದೂವರೆ ಲಕ್ಷ ರೂಪಾಯಿಗಳ ಗ್ರಾನೈಟ್ ಕಲ್ಲನ್ನು ದಾನ ನೀಡಿ ಸಹಕರಿಸಿದ್ದಾರೆ.