ಸಿದ್ದಾಪುರ, ಮಾ. 17: ಪಾಲಿಬೆಟ್ಟ ಖಾಸಗಿ ಕಾಫಿ ತೋಟವೊಂದಕ್ಕೆ ಅಕ್ರಮ ಪ್ರವೇಶ ಮಾಡಿ, ಮಾಲೀಕರಿಗೆ ಕೊಲೆ ಬೆದÀರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಪಾಲಿಬೆಟ್ಟದ ತೋಟ ಮಾಲೀಕ ಅಯ್ಯಪ್ಪ ಚೆಟ್ಟಿಯಾರ್ ಎಂಬವರಿಗೆ ಸೇರಿದ ತೋಟಕ್ಕೆ ಅಲ್ಲಿಯ ನಿವಾಸಿ ಕೊಳಂದವೇಲು ಎಂಬಾತ ಅಕ್ರಮವಾಗಿ ಪ್ರವೇಶ ಮಾಡಿ ಅಲ್ಲಿನ ಕಾವಲುಗಾರರ ಮೇಲೆ ಹಲ್ಲೆ ನಡೆಸಿ, ಕಾರ್ಮಿಕರಿಗೆ ಮದ್ಯವನ್ನು ಸರಬರಾಜು ಮಾಡಿ ತೋಟದ ಮಾಲೀಕ ಅಯ್ಯಪ್ಪ ಚೆಟ್ಟಿಯಾರ್‍ಗೆ ಜೀವ ಬೆದರಿಕೆಯೊಡ್ಡಿದ್ದಲ್ಲದೆ ಹಣದ ಪೆಟ್ಟಿಗೆ ಹಾಗೂ ದಾಖಲಾತಿಗಳನ್ನು ಕೊಂಡೊಯ್ದ ಆರೋಪದಡಿ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಳಪಡಿಸಿದ್ದಾರೆ.