*ಗೋಣಿಕೊಪ್ಪಲು, ಮಾ. 17; ಗ್ರಾ.ಪಂ. ನೌಕರ ಹಾಗೂ ಗ್ರಾ.ಪಂ. ಸದಸ್ಯರ ನಡುವಿನ ಪ್ರೇಮ ಪುರಾಣ ಬೀದಿಗೆ ಬಿದ್ದು ಪೆÇಲೀಸ್ ಠಾಣೆ ಮೆಟ್ಟಿಲೇರಿದೆ.
ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಹಾಗೂ ಗ್ರಾಮ ಪಂಚಾಯಿತಿ ತಾತ್ಕಾಲಿಕ ನೌಕರನ ನಡುವೆ ಹಲವು ತಿಂಗಳುಗಳಿಂದ ಪ್ರೇಮಾಂಕುರವಾಗಿದೆ. ಕೆಲವು ದಿನಗಳ ಹಿಂದೆ ಈ ವಿಚಾರ ಗ್ರಾಮ ಪಂಚಾಯಿತಿ ನೌಕರನ ಹೆಂಡತಿಯ ಗಮನಕ್ಕೆ ಬಂದಿದೆ. ಕೆಲ ದಿನಗಳಿಂದ ಇಬ್ಬರನ್ನು ಹಿಂಬಾಲಿಸಿದ ಆಕೆ ಶುಕ್ರವಾರ ಇಬ್ಬರನ್ನು ನೇರವಾಗಿ ಹಿಡಿದು ಗ್ರಾಮ ಪಂಚಾಯಿತಿ ಸದಸ್ಯೆಯ ಮೇಲೆ ಹಲ್ಲೆ ನಡೆಸಿ ಪ್ರಕರಣವನ್ನು ಪೆÇಲೀಸ್ ಠಾಣೆಗೆ ಕೊಂಡ್ಯೊಯ್ದು ದೂರು ಸಲ್ಲಿಸಿದ್ದಾರೆ. ಇತ್ತ ನೌಕರ ತನಗೆ ತನ್ನ ಹೆಂಡತಿ ಬೇಡ; ಪ್ರೇಯಸಿಯೇ ಸಾಕು ಹೆಂಡತಿಗೆ ವಿವಾಹ ವಿಚ್ಛೇದನಾ ನೀಡುತ್ತೇನೆ ಎಂದು ಹೇಳುತ್ತಿದ್ದಾನೆ. ಗ್ರಾಮ ಪಂಚಾಯಿತಿ ಕೆಲ ಸದಸ್ಯರನ್ನು ಸೇರಿಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಿದರೂ ಸಫಲತೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.