ಅಧಿಕಾರಿಯಿಂದ ಮೊಕದ್ದಮೆ ಸಿದ್ದಾಪುರ, ಮಾ. 16: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಕಲಿ ಸಹಿ ಹಾಗೂ ಮೊಹರು ಬಳಸಿ ರಹದಾರಿ ಪತ್ರ ತಯಾರಿಸಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕ್ರೆ ಬಳಿ ಕಾವೇರಿ ನದಿಯಿಂದ ಮಿನಿ ಲಾರಿಯಲ್ಲಿ (ಕೆ.ಎ .12- ಬಿ. 2101) ಅಕ್ರಮವಾಗಿ ಮರಳು ಸಾಗಾಟ ಮಾಡುವ ಸಂದರ್ಭ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿ ಕಾರಿಗಳು ವಾಹನವನ್ನು ತಡೆದು ಪರಿಶೀಲಿಸಿದಾಗ ಲಾರಿ ಚಾಲಕ ಪರವಾನಗಿ ರಹದಾರಿ ಪತ್ರವನ್ನು ಇಲಾಖಾಧಿಕಾರಿಗಳಿಗೆ ತೋರಿಸಿದ್ದಾನೆ.

ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ನಾಗೇಂದ್ರಪ್ಪ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಮಹೇಂದ್ರ ಕುಮಾರ್ ಸಂಪರ್ಕಿಸಿ ದಾಗ ತಾನು