ಸುಂಟಿಕೊಪ್ಪ, ಮಾ.16 : ಶ್ರೀಕೊಡಂಗಲ್ಲೂರು ಭದ್ರಕಾಳಿ ಶ್ರೀಕುರುಂಭ(ಭಗವತಿ) ದೇವಸ್ಥಾನದ ವಾರ್ಷಿಕ ಪೂಜೆಯು ತಾ.17 (ಇಂದು) ಮತ್ತು 18ರಂದು ನಡೆಯಲಿದೆ. ಕಳೆದ 52 ವರ್ಷಗಳಿಂದ ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಶ್ರೀ ಕೊಡಂಗಲ್ಲೂರು ಭದ್ರಕಾಳಿ ಶ್ರೀಕುರುಂಭ(ಭಗವತಿ) ದೇವಸ್ಥಾನzಲ್ಲಿÀ ಮಹಾಪೂಜೆಯ ಅಂಗವಾಗಿ 17 ರಂದು ಬೆಳಿಗ್ಗೆ 6.ಗಂಟೆಗೆ ಗಣಪತಿ ಹೋಮ ಸಂಜೆ 6. ಗಂಟೆಗೆ ಶ್ರೀ ಮುತ್ತಪ್ಪ ಪೈಂಗುತ್ತಿ, 6.45 ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಪೂಜೆ, 7.ಗಂಟೆಗೆ ಗುಳಿಗನಿಗೆ ಪೂಜೆ, 7.15 ಗಂ ಭದ್ರಕಾಳಿ ದೇವಿಗೆ ಅರ್ಚನೆ ನೈವೇದ್ಯ ಪೂಜೆ, 7.30 ಗಂಟೆಗೆ ದೇವಿಯ ದರ್ಶನ 8.15 ಗಂಟೆಗೆ ತಲಪುರಿ ಮೆರವಣಿಗೆ, 8.30 ರಿಂದ 10.30 ರವರೆಗೆ ದೇವಿ ದರ್ಶನ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ತಾ. 18 ರಂದು ಬೆಳಿಗ್ಗೆ 9ರಿಂದ 11ರವರೆಗೆ ದೇವಿಗೆ ಹರಕೆ ಅರ್ಪಣೆ ನಡೆಯಲಿದೆ.