ಮಡಿಕೇರಿ, ಮಾ. 17: ನಗರದ ಶ್ರೀ ರಾಮೋತ್ಸವ ಸಮಿತಿ ಮತ್ತು ಶ್ರೀ ಓಂಕಾರೇಶ್ವರ ದೇವಸ್ಥಾನದ ಸಂಯುಕ್ತಾಶ್ರಯದಲ್ಲಿ ತಾ. 18 ರಿಂದ 26 ರವರೆಗೆ 124ನೇ ವರ್ಷದ ಶ್ರೀ ರಾಮೋತ್ಸವ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ನಗರದ “ಓಂಕಾರ ಸದನ”Àದಲ್ಲಿ ಪತ್ರಿದಿನ ಸಂಜೆ 6.30 ರಿಂದ 9.30ರ ವರೆಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ತಾ. 18 ರಂದು ಮಡಿಕೇರಿಯ ವಿದುಷಿ ಸೀತಾಲಕ್ಷ್ಮಿ ಅಪ್ಪಯ್ಯ ಮತ್ತು ತಂಡದವರಿಂದ ಕರ್ನಾಟಕ ಸಂಗೀತ, ತಾ. 19 ರಂದು ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಭಜನೆ, ತಾ. 20 ರಂದು ಬೆಂಗಳೂರಿನ ಹರಿಕಥಾ ವಿದ್ವಾನ್ ಸೀತಾರಾಮ್ ಮುನಿಕೋಟಿ ಅವರಿಂದ ಹರಿಕಥೆ ನಡೆಯಲಿದೆ.
ತಾ. 21 ರಂದು ಮೈಸೂರಿನ ವಿದ್ವಾನ್ ಎನ್. ಶ್ರೀನಾಥ್ ಮತ್ತು ತಂಡದವರಿಂದ ಕರ್ನಾಟಕ ಸಂಗೀತ, ತಾ. 22 ರಂದು ಮಣಿಪಾಲ್ನ ವಿದುಷಿ ಮಣಿಪಾಲ್ ಅರುಣಾಕುಮಾರಿ ಅವರಿಂದ ವೀಣಾವಾದನ, ತಾ. 23 ರಂದು ಮೈಸೂರಿನ ವಿದ್ವಾನ್ ನಿತಿನ್ ಭಾರದ್ವಾಜ್ ಹಿಂದೂಸ್ಥಾನಿ ಶೈಲಿಯಲ್ಲಿ ದಾಸರ ಪದಗಳನ್ನು ಹಾಡಲಿದ್ದಾರೆ. ತಾ. 24 ರಂದು ಶಿವಮೊಗ್ಗದ ಹರಿಕಥಾ ವಿದ್ವಾನ್ ಶ್ರೀಶಿವಾನಂದ ಸ್ವಾಮಿ ಅವರಿಂದ ಹರಿಕಥೆ ನಡೆಯಲಿದೆ. ತಾ. 25 ರಂದು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಹಾಗೂ ಸಂಜೆ 6.30 ರಿಂದ ಮಡಿಕೇರಿಯ ಶಿವಶಕ್ತಿ ಮಹಿಳಾ ವೃಂದ ಹಾಗೂ ಚೆನ್ನೈನ ವಿದ್ವಾನ್ ಶ್ರೀಅನಯಂಪಟ್ಟಿ ಗಣೇಶನ್ ಮತ್ತು ತಂಡದಿಂದ ಶ್ರೀ ರಾಮನವಮಿ ಸ್ತೋತ್ರ ಪಠಣ ಹಾಗೂ ಜಲತರಂಗ ನಡೆಯಲಿದೆ.
ತಾ. 26 ರಂದು ಶ್ರೀ ಹನುಮಂತೋತ್ಸವದ ಪ್ರಯುಕ್ತ ಬೆಳಿಗ್ಗೆ 10 ರಿಂದ 12 ರ ವರೆಗೆ ಹಾಗೂ 6.30 ರಿಂದ ಮಡಿಕೇರಿಯ ಶೋಭಾ ಭಟ್ ಅವರಿಂದ ಮುಕ್ತಾವಳಿ ಮತ್ತು ದೇವರನಾಮ ನಡೆಯಲಿದ್ದು, ಶ್ರೀನಿಧಿ ಅವರು ಭಗವದ್ಗೀತಾ ಸಾರಾಂಶ ಪಠಣ ಮಾಡಲಿದ್ದಾರೆ. ಪ್ರತಿದಿನ ರಾಮಾಯಣದ ಬಗ್ಗೆ ರಸಪ್ರಶ್ನೆ ನಡೆಯಲಿದ್ದು, ಸಮಿತಿಯ ಕಾರ್ಯದರ್ಶಿ ಗೀತಾಗಿರೀಶ್ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9845327949, 9448377027ನ್ನು ಸಂಪರ್ಕಿಸಬಹುದಾಗಿದೆ.