ಮಡಿಕೇರಿ, ಮಾ. 17: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಕಾಂಗ್ರೆಸ್ ಅಜೆಂಡಾವಾಗಿದ್ದು ಮಿಕ್ಕೆಲ್ಲಾ ವಿಚಾರಗಳು ಕಾಂಗ್ರೆಸ್‍ನಿಂದ ದೂರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಅಭಿಪ್ರಾಯ ಪಟ್ಟಿದ್ದಾರೆ, ಚೇರಂಬಾಣೆಯ ಮಸೀದಿ ರಸ್ತೆ ಮತ್ತು ಮಾರುಕಟ್ಟೆ ರಸ್ತೆಯಲ್ಲಿ ಮುಖ್ಯಮಂತ್ರಿ ಗಳ ಪ್ಯಾಕೆಜ್ ಕಾಮಗಾರಿಗೆ ಚಾಲನೆ ನೀಡಿದ ಅವರು ದಶಕಗಳ ಕಾಲದ ಬೇಡಿಕೆಯಾದ ಚೇರಂಬಾಣೆಯಿಂದ ಬಾಡಗ ಮುಖಾಂತರ ನಾಪೋಕ್ಲು ಸಂಪರ್ಕ ರಸ್ತೆಯ ಕಾವೇರಿ ನದಿಗೆ ಸೇತುವೆಯ ನಿರ್ಮಾಣ ಮಾಡುವದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು. ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ಅವರು ಮುಖ್ಯಮಂತ್ರಿಗಳ ಪ್ಯಾಕೇಜ್‍ನ ಕಾಮಗಾರಿ ಪಟ್ಟಿಯನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಪಾರದರ್ಶ ಕವಾಗಿ ತಯಾರಿಸಿದ್ದು, ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಕಾಂಗ್ರೆಸ್ ಪರ ಒಲವನ್ನು ತೋರುತ್ತಿ ದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಬಿದ್ದಂಡ ಸುಮಿತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್, ಪ್ರ. ಕಾರ್ಯದರ್ಶಿ ಹ್ಯಾರಿಸ್ ಹಾಗೂ ಇತರರು ಪಾಲ್ಗೊಂಡಿದ್ದರು.