ಮಡಿಕೇರಿ, ಮಾ. 15: ಕೊಡಗು ಜಿಲ್ಲೆಗೆ ನುಸುಳಿರುವ ಭೂಮಾಫಿಯಾದೊಂದಿಗೆ, ಅನಧಿಕೃತ ಹೋಂಸ್ಟೇಗಳಿಂದ ವೇಶ್ಯಾವಾಟಿಕೆ, ಮೋಜು, ಮಸ್ತಿಯಂತಹ ವಿಕೃತ ಚಟುವಟಿಕೆಗಳು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇತ್ತ ಕಣ್ಗಾವಲು ಇಡಬೇಕೆಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಆಗ್ರಹಿಸಿದ್ದಾರೆ.
ನಗರದಲ್ಲಿ ಟಿ.ಪಿ. ರಮೇಶ್ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಹೋಂಸ್ಟೇಗಳಲ್ಲಿ ನಡೆಯುತ್ತಿರುವ ವಿಕೃತಿಗಳಿಂದ ಇಲ್ಲಿನ ಸಂಸ್ಕøತಿಗೆ ಧಕ್ಕೆ ಉಂಟಾಗಿದ್ದು, ಕೊಡಗಿನ ಖಾಯಂ ನಿವಾಸಿಗಳು ಪರಕೀಯರಂತೆ ಬಾಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಕ್ರಮ ಹೋಂ ಸ್ಟೇಗಳಿಗೆ ಭಯೋತ್ಪಾದಕರು ಮತ್ತು ನಕ್ಸಲರು ನುಸುಳಿ ರುವ ಸಾಧ್ಯತೆ ತಳ್ಳಿಹಾಕುವಂತಿಲ್ಲವೆಂದ ನಾಣಯ್ಯ, ಒಂದು ರೀತಿ ಭಯದ ವಾತಾವರಣ ಎದುರಾಗುತ್ತಿದ್ದು, ತಾವು ಕಳೆದ ಹತ್ತು ವರ್ಷಗಳಿಂದ ಜಿಲ್ಲಾಡಳಿತವನ್ನು ಈ ಬಗ್ಗೆ ಎಚ್ಚರಿಸುತ್ತಿ ರುವದಾಗಿ ಮಾರ್ನುಡಿದರು.
ಬಹುತ್ವ ನಾಶ: ದೇಶದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಪತ್ರಿಕಾರಂಗ ಎಲ್ಲೆಡೆ ಜಾತಿ ರಾಜಕಾರಣದ ನುಸುಳುವಿಕೆ ಯಿಂದ ರಾಷ್ಟ್ರೀಯ ಬಹುತ್ವ ನಾಶ ಹೊಂಡುವಂತಾಗಿದೆ ಎಂದು ವಿಷಾದಿಸಿದ ನಾಣಯ್ಯ, ಈ ಬಗ್ಗೆ ತಿದ್ದಿ ಬುದ್ಧಿ ಹೇಳಬೇಕಿದ್ದ ಸಾಹಿತಿಗಳಿಗೂ ಬಣ್ಣ, ಗುಂಪುಗಾರಿಕೆ ನುಸುಳಿದ್ದು, ಸಮಸ್ಯೆ ಸರಿಪಡಿಸದಿದ್ದರೆ ಭವಿಷ್ಯದಲ್ಲಿ ಅಪಾಯ ಎದುರಾದೀತು ಎಂದು ಎಚ್ಚರಿಸಿದರು.
ಮಳಲಿ ಕಳವಳ: ಕಾರ್ಯಕ್ರಮ ದಲ್ಲಿ ಕೊಡಗಿನ ಹೋಂಸ್ಟೇ ಸಂಸ್ಕøತಿ ಅಪಾಯಕಾರಿಯೆಂದು ಸಾಹಿತಿ ಮಳಲಿ ವಸಂತಕುಮಾರ್ ಕಳವಳ ವ್ಯಕ್ತಪಡಿಸುತ್ತಾ, ಹೋಂಸ್ಟೇಗೆ ‘ಗೇಟ್‍ಪಾಸ್’ ನೀಡದಿದ್ದರೆ ಭವಿಷ್ಯದಲ್ಲಿ ಕೊಡಗಿನ ಸಂಸ್ಕøತಿಗೆ ಗಂಡಾಂತರ ತಪ್ಪಿದಲ್ಲವೆಂದು ವ್ಯಾಖ್ಯಾನಿಸಿದರು.
ಬದುಕು ಪುಣ್ಯ: ಕೊಡಗಿನಲ್ಲಿ 1978ರ ಕಾಲಘಟ್ಟದಲ್ಲಿ ಇಂದಿನ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ತಾವು, ಈ ನೆಲದಲ್ಲಿ ಶಾಶ್ವತ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ನುಡಿದರು.
ಪೂರ್ವಜನ್ಮದ ಪುಣ್ಯ ಫಲದಿಂದ ಕೊಡಗಿನಲ್ಲಿ ಬದುಕುವ ಪುಣ್ಯ ಇಲ್ಲಿನ ಜನರಿಗೆ ಲಭಿಸಿದೆ ಎಂದ ಅವರು, ಅಂದು ಎಲ್ಲಿಯೂ ಧೂಳು ಕಾಣದಷ್ಟು ಈ ನಾಡು ಸುಂದರವಾಗಿತ್ತು ಎಂದು ನೆನಪಿಸಿಕೊಂಡರು.
ರಾಜ್ಯದ ಮುಖ್ಯಮಂತ್ರಿ ಆರ್. ಗುಂಡೂರಾವ್ ಹೆಲಿಕಾಪÀ್ಟರ್‍ನಲ್ಲಿ ಬಂದಿಳಿದಾಗ ಮೊದಲ ಬಾರಿ ಮಡಿಕೇರಿಯಲ್ಲಿ ಧೂಳು ಕಂಡೆ ಎಂದು ಸ್ಮರಿಸಿದ ಸಿದ್ದರಾಮಯ್ಯ, ಇಂದು ಈ ನಾಡಿನ ಪ್ರಕೃತಿ ಮೇಲಿನ ದೌರ್ಜನ್ಯ ನೋವುಂಟು ಮಾಡಿದೆ ಎಂದು ವಿಷಾದಿಸಿದರು.