ವೀರಾಜಪೇಟೆ, ಮಾ. 15: ತರಕಾರಿ ಅಂಗಡಿಯಲ್ಲಿ ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿರುವದನ್ನು ಪತ್ತೆ ಮಾಡಿ ವ್ಯಕ್ತಿಗಳ ಮೇಲೆ ದೂರು ದಾಖಲಿಸಿಕೊಂಡ ಘಟನೆ ವೀರಾಜಪೇಟೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಗೋಣಿಕೊಪ್ಪಲು ರಸ್ತೆಯಲ್ಲಿರುವ ತರಕಾರಿ ಅಂಗಡಿಯಲ್ಲಿ ಅಕ್ರಮವಾಗಿ ಗಾಂಜ ಮಾರಾಟ ಮಾಡುತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ (ಮೊದಲ ಪುಟದಿಂದ) ಶಾಂತಿ ನಗರದ ನಿವಾಸಿ ಹಸೇನಾರ್ ಎಂಬವರ ಪುತ್ರ ಶರೀಫ್ (30) ಮತ್ತು ವಿಜಯನಗರದ ನಿವಾಸಿ ಮೂಸ ಎಂಬವರ ಪುತ್ರ ಬಶೀರ್ (32) ಎಂಬವರನ್ನು ಬಂದಿಸಿ ಅರೋಪಿಗಳ ಬಳಿಯಿಂದ 240 ಗ್ರಾಂ ಗಾಂಜ ಸೇರಿದಂತೆ 1200 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಇವರುಗಳು ತರಕಾರಿ ವ್ಯಾಪಾರ ನಡೆಸುತ್ತಿದ್ದು ಮಧ್ಯಮ ವರ್ಗದ ಯುವಕರನ್ನು ಗುರಿಯಾಗಿಸಿಕೊಂಡು ಗುಪ್ತವಾಗಿ ಗಾಂಜ ಮಾರಾಟ ಮಾಡುತ್ತಿದ್ದರು. ಅಂಗಡಿಯ ಮೇಲೆ ಧಾಳಿ ನಡೆಸುವ ವೇಳೆಯಲ್ಲಿ 45 ಗಾಂಜ ಪೊಟ್ಟಣಗಳು ಸಿಕ್ಕಿವೆ. ಆರೋಪಿಗಳ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಖಾಯ್ದೆ 49:18 20(ಬಿ) ಎನ್.ಡಿ.ಪಿ.ಎಸ್. ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಡಿ.ವೈಎಸಿ.್ಪ ನಾಗಪ್ಪ ಅವರ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಕುಮಾರ್ ಅರಾಧ್ಯ, ಠಾಣಾಧಿಕಾರಿ ಸಂತೋಷ್ ಕಶ್ಯಪ್, ಸಹಾಯಕ ಠಾಣಾಧಿಕಾರಿ ಸುಬ್ರಮಣ, ಸಿಬ್ಬಂದಿಗಳಾದ, ರಂಜನ್‍ಕುಮಾರ್, ಮುನೀರ್, ಸತೀಶ್, ಚಾಲಕ ಯೋಗೆಶ್ ಕಾರ್ಯಾಚಾರಣೆಯಲ್ಲಿ ಭಾಗವಹಿಸಿದ್ದರು