ಮಡಿಕೇರಿ, ಮಾ. 14: ಜೀರ್ಣೋದ್ಧಾರ ಸಂಬಂಧ ಮೂರು ವರ್ಷಗಳಿಂದ ವಾರ್ಷಿಕೋತ್ಸವ ಸ್ಥಗಿತಗೊಂಡಿದ್ದ ಕರವಲೆ ಭಗವತಿ ಮಹಿಷಮರ್ಧಿನಿ ಉತ್ಸವ ಇಂದಿನಿಂದ ಆರಂಭಗೊಂಡಿದೆ. ತಾ. 16ರಂದು ಮಧ್ಯಾಹ್ನ 2 ಗಂಟೆಗೆ ಎತ್ತು ಪೋರಾಟದೊಂದಿಗೆ ವಾರ್ಷಿಕಪೂಜೆ, ರಾತ್ರಿ ವಿಷ್ಣುಮೂರ್ತಿ ತೆರೆ ಜರುಗಲಿದೆ. ತಾ. 17ರಂದು ಸಂಜೆ ದೇವರ ಜಳಕ ಸಹಿತ ದೇವತಾ ಕಾರ್ಯಗಳು ನೆರವೇರಲಿವೆ ಎಂದು ದೇವಾಲಯ ಸಮಿತಿ ತಿಳಿಸಿದೆ.