ಶ್ರೀಮಂಗಲ, ಮಾ. 14: ಹುಲಿ ಧಾಳಿಗೆ ತುತ್ತಾಗಿ ಬಲಿಯಾದ ಜಾನುವಾರಗಳ ಸಂತ್ರಸ್ತ ರೈತರಿಗೆ ಹೆಚ್ಚುವರಿ ಪರಿಹಾರ ನೀಡುವದು ಸೇರಿದಂತೆ ಹುಲಿ ಸೆರೆಗೆ ಗಂಭೀರವಾಗಿ ಕಾರ್ಯಾಚರಣೆ ಕೈಗೊಳ್ಳಬೇಕು. ಇಲ್ಲದಿದ್ದರೆ ಹುಲಿ ಧಾಳಿಗೆ ತುತ್ತಾದ ಜಾನುವಾರುಗಳ ಕಳೆಬರಗಳನ್ನು ಶ್ರೀಮಂಗಲ ಅರಣ್ಯ ಕಛೇರಿಯ ಒಳಗಡೆ ತಂದು ಹಾಕಿ ಉಗ್ರ ಪ್ರತಿಭಟನೆ ನಡೆಸು ವದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ನಮೂದಿಸುವ ಮೌಲ್ಯ ಪರಿಗಣಿಸಿ ನೀಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಅಂಗೀಕಾರವಾದರೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಾಗಲಿದೆ. ಪ್ರಸ್ತಾವನೆ ಅಂಗೀಕಾರವಾದ ದಿನದಿಂದ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿದೆ. ಇಂದಿನ ಪ್ರಕರಣಕ್ಕೆ ಸರ್ಕಾರದ ಆದೇಶದಂತೆ ರೂ. 10 ಸಾವಿರ ಪರಿಹಾರ ನೀಡಲು ಸಾಧ್ಯ, ದನುಗಾಲ, ಬಾಳೆಲೆ ಪ್ರಕರಣಗಳಿಗೆ ಹುಲಿ ಸಂರಕ್ಷಣ ನಿಧಿಯಿಂದ ಹೆಚ್ಚುವರಿ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ವೀರಾಜಪೇಟೆ ವಿಭಾಗದ ಎಸಿಎಫ್ ಶ್ರೀಪತಿ ಮಾತನಾಡಿ ಜಾನುವಾರಿನ ಕಳೆಬರದ ಬದಲು ಬೋನಿನೊಳಗೆ ಜೀವಂತ ಆಡು ಇರಿಸಿ ಕಾರ್ಯಾಚರಣೆ ಕೈಗೊಳ್ಳಲಾಗುವದು. ಕೂಂಬಿಂಗ್ ಕಾರ್ಯಾಚರಣೆ ಸೇರಿದಂತೆ ದೊಡ್ಡ ಗಾತ್ರದ ಬೋನ್ ತಂದಿರಿಸಿ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವದು. ಗರಿಷ್ಠ ಪ್ರಮಾಣದ ಪರಿಹಾರಕ್ಕಾಗಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಅರಣ್ಯಾಧಿಕಾರಿಗಳು 10 ಸಾವಿರಕ್ಕಿಂತ ಹೆಚ್ಚು ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ಮಾತಿಗೆ ಉದ್ರಿಕ್ತರಾದ ಪ್ರತಿಭಟನಕಾರರು ಬ್ಯಾರಿಕೇಡನ್ನು ತಳ್ಳಿ ಒಳನುಗ್ಗುವ ಪ್ರಯತ್ನ ಮಾಡಿದರು. ಆದರೆ ಹೆಚ್ಚಿನ ಪ್ರಮಾಣದಲ್ಲಿದ್ದ ಪೊಲೀಸರು ತಡೆದು ನಿಯಂತ್ರಿಸಿದರು.

ಈ ಸಂದರ್ಭ ಮಡಿಕೇರಿ ವನ್ಯ ಜೀವಿ ವಿಭಾಗದ ಎಸಿಎಫ್ ದಯಾನಂದ್, ಶ್ರೀಮಂಗಲ ಆರ್‍ಎಫ್‍ಒ ವಿರೇಂದ್ರ, ಪೊನ್ನಂಪೇಟೆ ಆರ್‍ಎಫ್‍ಓ ಗಂಗಾಧರ್ ಹಾಜರಿದ್ದರು. ಕುಟ್ಟ ವೃತ್ತ ನಿರೀಕ್ಷಕ (ಉಸ್ತುವಾರಿ) ಸಿ.ಎನ್.ದಿವಾಕರ್, ಶ್ರೀಮಂಗಲ ಠಾಣಾಧಿಕಾರಿ ಸಣ್ಣಯ್ಯ, ಪೊನ್ನಂಪೇಟೆ ಠಾಣಾಧಿಕಾರಿ ಬಿ.ಜಿ. ಮಹೇಶ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಪ್ರತಿಭಟನೆಯಲ್ಲಿ ಮಲ್ಲಂಗಡ ಮಿಲನ್, ಕುಂಞಂಗಡ ಕೃಷ್ಣ, ಪೊನ್ನಂಪೇಟೆ ಎಪಿಎಂಸಿ ಅಧ್ಯಕ್ಷ ಮಲ್ಲಮಾಡ ಪ್ರಭುಪೂಣಚ್ಚ, ಚಟ್ಟಂಗಡ ರಂಜಿ, ಕುಂಞಂಗಡ ನಟೇಶ್, ಮಾಣೀರ ರಾಣ, ಕಾಳಿಮಾಡ ಪ್ರಶಾಂತ್, ಚೊಟ್ಟೆಯಂಡಮಾಡ ಪ್ರಜ, ಕುಂಞಂಗಡ ರಮೇಶ್, ಹೊಟ್ಟೇಂಗಡ ತಿಮ್ಮಯ್ಯ, ಚೆಟ್ಟಂಗಡ ಮಹೇಶ್ ಮಂದಣ್ಣ, ಸಂತ್ರಸ್ತ ರೈತರಾದ ಚೆಟ್ಟಂಗಡ ನವೀನ್, ಚೆಟ್ಟಂಗಡ ರಿಶಿ, ಚೆಟ್ಟಂಗಡ ರಾಜು ನಂಜಪ್ಪ ಸೇರಿದಂತೆ ನೂರಾರೂ ರೈತರು ಪಾಲ್ಗೊಂಡಿದ್ದರು.