ಮಡಿಕೇರಿ, ಮಾ. 14: ಶನಿವಾರಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ಪುಟ್ಟ ಎಂಬವರ ಪುತ್ರಿ ಪ್ರಿಯಾಂಕ (24) ಎಂಬಾಕೆ ತಾ.11ರಿಂದ ಕಾಣೆಯಾಗಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಹೊಳೆನರಸಿಪುರ ನಿವಾಸಿ ರಂಗಸ್ವಾಮಿ ಎಂಬಾತನನ್ನು ವಿವಾಹ ವಾಗಿದ್ದು, ಇತ್ತೀಚೆಗೆ ತನ್ನ ಮಕ್ಕಳೊಂದಿಗೆ ತವರಿನಲ್ಲಿ ನೆಲೆಸಿದ್ದು, ಮಕ್ಕಳನ್ನು ಮನೆಯಲ್ಲಿ ಬಿಟ್ಟು ನಾಪತ್ತೆ ಯಾಗಿರುವದಾಗಿ ತಿಳಿದುಬಂದಿದೆ.