ನಾಪೋಕ್ಲು, ಮಾ. 14: ಸಮೀಪದ ನರಿಯಂದಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊದವಾಡ ಗ್ರಾಮದ ಪೊದ್ದುಮಾನಿಯಿಂದ ಪೆರಿಯಂಗೆರೆವರೆಗೆ ರೂ. 50 ಲಕ್ಷ ಅನುದಾನದಲ್ಲಿ ನಿರ್ಮಿಸಿದ ಕಾಂಕ್ರಿಟ್ ರಸ್ತೆಯನ್ನು ಇಂದು ಶಾಸಕ ಬೋಪಯ್ಯ ಉದ್ಘಾಟಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಸದಸ್ಯರಾದ ಕಿರಣ್‍ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಗ್ರಾ.ಪಂ. ಸದಸ್ಯರಾದ ಪ್ರಸನ್ನಕೋಡೀರ, ಕೆ.ಜೆ. ಪ್ರಕಾಶ್, ಪ್ಯಾಕ್ಸ್ ಉಪಾಧ್ಯಕ್ಷರಾದ ನೆರಪಂಡ ಸತೀಶ್, ಕೋಡೀರ ಪೃಥ್ವಿ ಮಂದಣ್ಣ, ನೆಲ್ಲಚಂಡ ಗಣೇಶ್, ನೆಯ್ಯೀರ ಸುಭಾಷ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.