ನಾಪೆÇೀಕ್ಲು, ಮಾ. 14: ಬಿಎಸ್‍ಎನ್‍ಎಲ್‍ನ ಸ್ಥಿರ ದೂರವಾಣಿ ಸೇರಿದಂತೆ, ಮೊಬೈಲ್ ಸಂಪರ್ಕವು ಲಭ್ಯವಾಗುತ್ತಿಲ್ಲ. ಆದುದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘ, ಶ್ರೀ ಭಗವತಿ ಯುವಕ ಸಂಘ ಮತ್ತು ಭಗವತಿ ಸ್ವಸಹಾಯ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕೊಳಕೇರಿ ಶ್ರೀ ಭಗವತಿ ದೇವಳದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಭಿವೃದ್ಧಿ ಸಂಘದ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ ಮತ್ತಿತರರು ದಿನೇ ದಿನೇ ಎಲ್ಲಾ ಸೌಲಭ್ಯಗಳು ಹೆಚ್ಚುತ್ತಿರುವ ಕಾಲ ಘಟ್ಟದಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಯ ನಿರ್ಲಕ್ಷ್ಯತನದಿಂದ ಗ್ರಾಮದಲ್ಲಿ ಬಿಎಸ್‍ಎನ್‍ಎಲ್ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಬಗ್ಗೆ ದೂರು ನೀಡಲು ಸ್ಥಳೀಯ ಕಚೇರಿಗೆ ತೆರಳಿದರೆ. ಯಾವದೇ ಅಧಿಕಾರಿಯಾಗಲಿ, ಸಿಬ್ಬಂದಿಯಾಗಲಿ ಇರುವದಿಲ್ಲ. ಆದುದರಿಂದ ಈ ಬಗ್ಗೆ ಇಲಾಖಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.